ಕೂದಲುರುವ ಸಮಸ್ಯೆಯನ್ನು ನಿವಾರಿಸಲು ಮನೆಯಲ್ಲಿಯೇ ಬೆಳ್ಳುಳ್ಳಿ ಶಾಂಪೂ ತಯಾರಿಸಿ ಬಳಸಿ.
15 ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ನುಣ್ಣಗೆ ರುಬ್ಬಿ ಅದಕ್ಕೆ 1 ಚಮಚ ಆಲಿವ್ ಆಯಿಲ್, 4 ಹನಿ ಪುದೀನಾ ಆಯಿಲ್, 4 ಹನಿ ಟೀ ಟ್ರೀಆಯಿಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಶಾಂಪೂವಿಗೆ ಬೆರೆಸಿ ಕೂದಲಿಗೆ ಹಚ್ಚಿ. ಇದನ್ನು ಕನಿಷ್ಟ 2 ಬಾರಿ ಬಳಸಿ.
ಇದು ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಕೂದಲುರುವ ಸಮಸ್ಯೆಯನ್ನು ನಿವಾರಿಸುತ್ತದೆ. ತಲೆಯಲ್ಲಿ ಹೊಟ್ಟು, ಹೇನಿನ ಸಮಸ್ಯೆ ಕಾಡುವುದಿಲ್ಲ. ಇದು ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತದೆ. ಇದರಿಂದ ಕೂದಲು ದಪ್ಪವಾಗಿ ಬೆಳೆಯುತ್ತದೆ.