ಬೆಂಗಳೂರು : ಅಪರಾಧ ಚಟುವಟಿಕೆಗಳನ್ನ ತಡೆಗಟ್ಟಲು ಸಿಲಿಕಾನ್ ಸಿಟಿ ಬೆಂಗಳೂರಿನ ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಕೆಲವು ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಹೌದು ಇನ್ನುಮುಂದೆ ಪಿಜಿ ಆರಂಭಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ.
ಇನ್ನು ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನ ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಕೆಲವು ಕಠಿಣ ನಿಯಮಗಳುಳ್ಳ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ. ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣ ‘ಎಕ್ಸ್’ ಮೂಲಕ ಪಿ.ಜಿ.ಮಾಲೀಕರಿಗೆ ಮಾರ್ಗಸೂಚಿಯ ಬಗ್ಗೆ ತಿಳಿಸಲಾಗಿದೆ.
ಪೊಲೀಸ್ ಇಲಾಕೆ ಮಾರ್ಗಸೂಚಿಯಲ್ಲಿ ಏನಿದೆ?
- ಎಲ್ಲ ಪಿಜಿಗಳು ಅಗತ್ಯವಿರುವ ಪರವಾನಿಗೆಯನ್ನ ಬಿಬಿಎಂಪಿಯಿಂದ ಪಡೆಯುವುದು ಕಡ್ಡಾಯ
- ಪಿಜಿ ವಾಸಕ್ಕೆ ಬರುವ ಎಲ್ಲ ವ್ಯಕ್ತಿಗಳ ಗುರುತಿನ ಚೀಟಿ ಪಡೆಯಬೇಕು.
- ಇತ್ತೀಚಿನ ಭಾವಚಿತ್ರ ಮತ್ತು ರಕ್ತ ಸಂಬಂಧಿಗಳ ವಿವರ, ಮೊಬೈಲ್ ನಂಬರ್ ದಾಖಲೆ ಮಾಡಬೇಕು.
- ಇನ್ನೂ ಪಿಜಿಗೆ ಭೇಟಿ ನೀಡಲು ಬರುವ ಸಂಬಂಧಿಕರಾಗಲಿ ಅಥವಾ ಯಾರೇ ಆಗಿರಲಿ ಅವರ ವಿವರಗಳನ್ನೂ ಪ್ರತ್ಯೇಕವಾಗಿ ನಿರ್ವಹಿಸಬೇಕು.
- ಸಿಸಿಟಿವಿ, ಅಗ್ನಿ ಸುರಕ್ಷತಾ ವ್ಯವಸ್ಥೆ ಹೊಂದಿರಬೇಕು.
- ಮಾದಕ ವಸ್ತು ಸೇವನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬಾರದು.
- ಪಿಜಿಗಳಿಗೆ ಅಡುಗೆ ಕೆಲಸ, ಸೆಕ್ಯೂರಿಟಿ ಗಾರ್ಡ್, ಕ್ಲೀನಿಂಗ್ಗೆ ಬರುವ ಸಿಬ್ಬಂದಿಯ ಬಗ್ಗೆ ಪೂರ್ವಾಪರಗಳನ್ನು ಪೊಲೀಸ್ ಪರಿಶೀಲನೆಗೆ ಒಳಪಡಿಸಿ ನಂತರ ನೇಮಕ ಮಾಡಿಕೊಳ್ಳಬೇಕು.
- ಯಾವುದೇ ವಿದೇಶಿ ಪ್ರಜೆಗಳ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು.
- ಪಿಜಿಗಳಲ್ಲಿ ವಾಸಕ್ಕೆ ಇರುವವರನ್ನು ಬಿಟ್ಟು ಇತರರಿಗೆ ತಾತ್ಕಾಲಿಕ ವಾಸ ಕಲ್ಪಿಸಬಾರದು.
- ನ್ಯಾಯಾಲಯದ ಆದೇಶದನ್ವಯದ ರಾತ್ರಿ 10ರಿಂದ ಬೆಳಗ್ಗೆ 6 ವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.
ಇನ್ನು ಪೊಲೀಸ್ ಇಲಾಖೆ ಹೊರಡಿಸಿದ ಸುರಕ್ಷತೆ ಹಾಗೂ ಮುಂಜಾಗ್ರತಾ ಮಾರ್ಗಸೂಚಿಗಳನ್ನು ಪಾಲಿಸದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಸಂಬಂಧಪಟ್ಟ ಪಿ.ಜಿ.ಗಳ ಮಾಲೀಕರು ಹಾಗೂ ಅದರ ವ್ಯವಸ್ಥಾಪಕರೇ ನೇರ ಹೊಣೆಗಾರರು ಎಂದು ಸೂಚಿಸಲಾಗಿದೆ.