‘ಬಿಗ್ ಬಾಸ್ ಸೀಸನ್ 10’ ಈ ಹಿಂದಿನ ಎಲ್ಲಾ ಸೀಸನ್ಗಳ ರೆಕಾರ್ಡ್ ಬ್ರೇಕ್ ಮಾಡಿ ಸದ್ದು ಮಾಡಿರುವಂತಹ ಸೀಸನ್. ಕಾಂಟ್ರವರ್ಸಿ, ಟ್ರೋಲ್, ಟೀಕೆ ಹೀಗೆ ಹಲವು ವಿಚಾರಗಳಿಂದ ಈ ಬಾರಿಯ ಕನ್ನಡದ ಬಿಗ್ ಬಾಸ್ ಸದ್ದು ಮಾಡುತ್ತಿದೆ. ಇದೀಗ ಸುದೀಪ್, ವರ್ತೂರು ಸಂತೋಷ್ ಜೈಲಿಗೆ ಹೋದ ವಿಚಾರವನ್ನು ಮನೆಯೊಳಗಡೆ ಇರುವ ಸ್ಪರ್ಧಿಗಳಿಗೆ ರಿವೀಲ್ ಮಾಡಿದ್ದಾರೆ. ಜೊತೆಗೆ ಅವರಿಗೆ 3 ಮದುವೆಯಾದರು ಅಚ್ಚರಿಪಡಬೇಕಿಲ್ಲ ಎಂದು ಸುದೀಪ್ ತಮಾಷೆ ಮಾಡಿದ್ದಾರೆ.
ಇಡೀ ಮನೆಯಲ್ಲಿ ಒಂದು ಗುಟ್ಟು ಇದೆ. ಹೊರ ಜಗತ್ತಿಗೆ ಆ ಗುಟ್ಟು ಗೊತ್ತಿದೆ. ಮನೆಯ ಒಂದು ಸ್ಪರ್ಧಿಗೆ ಮಾತ್ರ ಅದು ಗೊತ್ತಿದೆ. ಉಳಿದ ಯಾರಿಗೂ ಆ ಗುಟ್ಟು ತಿಳಿದಿಲ್ಲ, ಏನದು ಎಂದು ಸುದೀಪ್ ಸ್ಪರ್ಧಿಗಳಿಗೆ ಕೇಳಿದ್ದರು. ಮನೆಯವರಿಗೆ ಇದನ್ನು ಕೇಳಿ ಗೊಂದಲ ಆಯಿತು. ಸುದೀಪ್ ಅವರು ವರ್ತೂರು ಅವರೇ ಎಂದು ಹೇಳಿದರು. ಆಗ ವರ್ತೂರು ಸಂತೋಷ್ ಅವರಿಗೆ ಇದು ತಮ್ಮದೇ ವಿಚಾರ ಎಂಬುದು ಗೊತ್ತಾಯಿತು.
ವರ್ತೂರು ಸಂತೋಷ್ ಅವರು ಒಂದು ವಾರ ಹೊರಗೆ ಹೋಗಿ ಬಂದರು. ಮನೆಯಲ್ಲಿರುವ ಯಾರಿಗೂ ಇದಕ್ಕೆ ಕಾರಣ ಗೊತ್ತಿಲ್ಲ. ಹೊರ ಬಂದು ಎಲ್ಲವನ್ನೂ ತಿಳಿದುಕೊಂಡು ಹೋದರು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದಲ್ಲ. ಏನಾಗಿತ್ತು ಹೇಳಿ ಎಂದು ಸುದೀಪ್ ಕೇಳಿದ್ದರು. ಈ ಮಾತು ಕೇಳುತ್ತಿದ್ದಂತೆ ವರ್ತೂರು ಸಂತೋಷ್ ಅವರು ಕಣ್ಣೀರು ಹಾಕಿದರು.
Govt Scheme: ಬ್ಯುಸಿನೆಸ್ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಲೋನ್.! ಸುಲಭವಾಗಿ ಪಡೆಯಿರಿ 10 ಲಕ್ಷ ರೂ.
ವರ್ತೂರು ಅವರ ಕತ್ತಿನಲ್ಲಿ ಒಂದು ಪೆಂಡೆಂಟ್ ಇತ್ತು. ಅದು ಧರಿಸುವಂತಿರಲಿಲ್ಲ. ಈ ಕಾರಣಕ್ಕೆ ಅವರನ್ನು ಹೊರಗೆ ಕರೆತರಲಾಯಿತು. ಅವರು ಜೈಲು ಸೇರಿದರು. ಬಿಗ್ ಬಾಸ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಅವರು ಒಂದು ವಾರ ಜೈಲಿನಲ್ಲಿ ಇದ್ದರು. ಸಾಕಷ್ಟು ಅನುಭವಿಸಿಕೊಂಡು ಬಂದರು. ಅವರು ನಿಜಕ್ಕೂ ಸ್ಟ್ರಾಂಗ್ ಎಂದರು ಸುದೀಪ್. ಸುದೀಪ್ ಹೇಳಿದ ವಿಚಾರ ಕೇಳಿ ಅನೇಕರಿಗೆ ಶಾಕ್ ಆಗಿದೆ.
ವರ್ತೂರು ಸಂತೋಷ್ ಅವರ ಸಂಸಾರ ಈಗಾಗಲೇ ಮುರಿದು ಬಿದ್ದಿದೆ. ಆ ವಿಚಾರ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸುದೀಪ್ ಅವರು ವರ್ತೂರು ಸಂತೋಷ್ ಮದುವೆ ಬಗ್ಗೆ ಫಿನಾಲೆಯಲ್ಲಿ ಮಾತನಾಡಿದ್ದಾರೆ. ಈಗೀರೋ ಜನಪ್ರಿಯತೆಗೆ ವರ್ತೂರಿಗೆ ಮೂರು ಮದುವೆ ಆಗುತ್ತದೆ ಎಂದರು ಸುದೀಪ್.
ಇದಕ್ಕೆ ಉತ್ತರಿಸಿದರು ವರ್ತೂರು ಸಂತೋಷ್ ತಾಯಿ, ಆದರೆ ಆಗಲಿ ಸರ್. ಸಾಮರ್ಥ್ಯ ಇದ್ದರೆ ಆಗಲಿ ಬಿಡಿ ಎಂದರು. ಆಗ ಎಲ್ಲರೂ ತನಿಷಾ ಅತ್ತ ನೋಡಿದರು. ತನಿಷಾ ಅವರು ನಾಚಿ ನೀರಾದರು. ಈ ಮೂಲಕ ಪರೋಕ್ಷವಾಗಿ ವರ್ತೂರು ಸಂತೋಷ್ ಮತ್ತು ತನಿಷಾ (Tanisha Kuppanda) ಮದುವೆ (Wedding) ಬಗ್ಗೆ ಮಾತನಾಡಿದ್ರಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ.