ದೊಡ್ಮನೆಯ 112 ದಿನಗಳ ಆಟಕ್ಕೆ ತೆರೆ ಬೀಳುವ ಸಮಯ ಬಂದಿದೆ. ಗ್ರ್ಯಾಂಡ್ ಫಿನಾಲೆಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಬಿಗ್ ಬಾಸ್ ಕನ್ನಡ 10 ವಿನ್ನರ್ ಘೋಷಣೆಗೆ ಕೌಂಟ್ಡೌನ್ ಶುರುವಾಗಿದೆ. ತುಕಾಲಿ ಸಂತು ಎಲಿಮಿನೇಟ್ ಆಗ್ತಿದ್ದಂತೆ ವರ್ತೂರು ಸಂತೋಷ್ ಕೂಡ ಎಲಿಮಿನೇಟ್ (Elimination) ಆಗಿದ್ದಾರೆ ಎನ್ನಲಾಗುತ್ತಿದೆ.
ಹಳ್ಳಿಕಾರ್ ವರ್ತೂರು ಸಂತೋಷ್ ಅವರು ಟಾಪ್ 2ನಲ್ಲಿ ಇರುತ್ತಾರೆ ಎಂದೇ ಭಾವಿಸಲಾಗಿತ್ತು. ಇದೀಗ ತುಕಾಲಿ ಸಂತು ಆಪ್ತ ಸ್ನೇಹಿತ ವರ್ತೂರು ಸಂತೋಷ್ಗೆ ದೊಡ್ಮನೆಯ ಆಟ ಅಂತ್ಯವಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Govt Scheme: ಬ್ಯುಸಿನೆಸ್ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಲೋನ್.! ಸುಲಭವಾಗಿ ಪಡೆಯಿರಿ 10 ಲಕ್ಷ ರೂ.
ವರ್ತೂರು ಸಂತೋಷ್ ಅವರ ವಿಚಾರದಲ್ಲಿ ಅದೇನೇ ವಿವಾದವಾಗಿದ್ದರೂ ಕೂಡ ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಟಫ್ ಫೈಟ್ ನೀಡಿದ್ದರು. ಸದ್ಯ ವರ್ತೂರು ಎಲಿಮಿನೇಟ್ ಎಂಬ ಹರಿದಾಡುತ್ತಿರೋ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಸುದ್ದಿ ಸುಳ್ಳಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ದಾರೆ.