ಬೆಂಗಳೂರು: ಅವ್ರಿನ್ನೂ ಮೀಸೆ ಚಿಗುರದ ಹುಡುಗ್ರು..ಸಿನಿಮಾಗಳನ್ನ ನೋಡಿ ಏರಿಯಾದಲ್ಲಿ ಹವಾ ಮೈಂಟೇನ್ ಮಾಡೋಕೆ ಮುಂದಾಗಿದ್ರು..ರೀಲ್ಸ್ ನಲ್ಲಿ ಮಚ್ಚಿಡಿದು ಪೋಸ್ ಕೊಡ್ತಿದ್ದ ಹುಡುಗ್ರಿಗೆ ಅದೇ ಏರಿಯಾದ ರೌಡಿ ಸಾರ್ವಜನಿಕವಾಗಿ ಸಿಕ್ಕಾಗೆಲ್ಲಾ ನಿಂದಿಸ್ತಿದ್ದ..ಇದೇ ಕಾರಣಕ್ಕೆ ಸ್ಕೆಚ್ ಹಾಕಿದ್ದೋರು ಮನೆಗೆ ನುಗ್ಗಿ ರೌಡಿಗೆ ಚೆಟ್ಟ ಕಟ್ಟಿದ್ರು..ಈ ಕುರಿತ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.. ಹೀಗೆ ಮುಖಕ್ಕೆ ಮಾಸ್ಕ್ ಹಾಕಿ ಕರೆದೊಯ್ತಿರೋ ಈ ಯುವಕರನ್ನೊಮ್ಮೆ ನೋಡಿ.ಹೆಸ್ರು ಸುನಿಲ್, ಪ್ರಶಾಂತ್, ಧನುಷ್, ಕ್ಲಾಮೆಂಟ್ ..ಇವ್ರಿಗಿನ್ನೂ ಸರಿಯಾಗಿ ಮೀಸೆ ಚಿಗುರಿಲ್ಲ..
ಸಿನಿಮಾಗಳಲ್ಲಿ ಪ್ರೇರೇಪಿತರಾಗಿ ಏರಿಯಾದಲ್ಲಿ ಹವಾ ಮೈಂಟೇನ್ ಮಾಡ್ತಿದ್ರು..ಅದ್ಕೆ ಮಾರಾಕಸ್ತ್ರಗಳನ್ನ ಹಿಡಿದು ರೀಲ್ಸ್ ಮಾಡಿ ಬಿಲ್ಡಪ್ ತೆಗೆದುಕೊಳ್ತಿದ್ರು.. ಹೀಗಿರುವಾಗ ವಿವೇಕನಗರದ ರೌಡಿಶೀಟರ್ ಮಿಲ್ಟ್ರಿ ಸತೀಶ, ಇವ್ರುಗೆ ಸಿಕ್ಕಾಗೆಲ್ಲಾ ಬೈಯೋದು, ಎಲ್ಲರ ಬಳಿ ನಿಂದಿಸೋದು ಮಾಡ್ತಿದ್ನಂತೆ..ಮೂರನೇ ಆರೋಪಿ ಧನುಷ್ ಎಂಬಾತನಿಗೆ ಬಟ್ಟೆ ಬಿಚ್ಚಿ ಅವಮಾನ ಕೂಡಾ ಮಾಡಿದ್ನಂತೆ..ಅದಕ್ಕಾಗಿ ಸತೀಶನ ಹತ್ಯೆ ಮಾಡಿದ್ರೆ ಏರಿಯಾದಲ್ಲಿ ಹವಾ ಮೈಂಟೇನ್ ಮಾಡ್ಬೋದು ಅಂತ ಸ್ಕೆಚ್ ಹಾಕಿದ್ರು..
Govt Scheme: ಬ್ಯುಸಿನೆಸ್ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಲೋನ್.! ಸುಲಭವಾಗಿ ಪಡೆಯಿರಿ 10 ಲಕ್ಷ ರೂ.
ಹೌದು, ವಿವೇಕನಗರದ ಮಾಯಾಬಜಾರ್ ನಲ್ಲಿ ನಡೆದ ಸತೀಶ್ ಕೊಲೆ ಮಾಡಿದ್ದ ಆರೋಪಿಗಳು ಇವ್ರೇ..ಮಂಗಳವಾರ ರಾತ್ರಿ ಬಾರ್ ನಲ್ಲಿ ನಾಲ್ಬರು ಆರೋಪಿಗಳು ಎಣ್ಣೆ ಹೊಡೆಯುವಾಗ ಎಂಟ್ರಿ ಕೊಟ್ಟಿದ್ದ ಸತೀಶ್ ಎಲ್ಲರ ಎದುರು ಬೈದಿದ್ದ..ಇದೇ ಕಾರಣಕ್ಕೆ ಯಾವಾಗ್ಲೂ ಬೈತಾನೆ,ಹೊಡಿತಾನೆ ಎಂದು ಕೊಲೆಗೆ ಆರೋಪಿಗಳು ಪ್ಲಾನ್ ಮಾಡಿದ್ದಾರೆ..
ಅದಕ್ಕಾಗಿ ಶಿವಾಜಿನಗರದಲ್ಲಿ ಹೋಗಿ ನಾಲ್ಕು ಲಾಂಗ್ ತಂದಿದ್ರು.. ಬುಧವಾರ ಮುಂಜಾನೆ ಮೂರು ಗಂಟೆಗೆ ಸತೀಶನ ಮನೆ ಬಾಗಿಲು ಬಡಿದ್ದಿದ್ದಾರೆ. ಎಷ್ಟೇ ಬಾಗಿಲು ಬಡಿದ್ರು ತೆಗೆಯದಿದ್ದಾಗ ನಾವು ಕ್ರೈಂ ಪೊಲೀಸ್ ಬಾಗಿಲು ತೆಗಿ ಎಂದಾಗ ಬಾಗಿಲು ತೆಗೆದ ಕೂಡಲೇ ಮಾಸ್ಕ್ ಹಾಕಿಕೊಂಡಿದ್ದ ಯುವಕರು ಸತೀಶನ ಮೇಲೆ ಲಾಂಗ್ ಗಳನ್ನು ಬೀಸಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ರು.. ಆ ಬಳಿಕ ಬೈಕ್ ನಲ್ಲಿ ಕೆಂಗೇರಿ ಬಳಿ ಹೋಗಿ ಲಾಂಗ್ ಗಳನ್ನು ಬಿಸಾಡಿ, ಮೈಸೂರಿಗೆ ಎಸ್ಕೇಪ್ ಆಗಿದ್ರು.
ಒಂದು ದಿನ ಮೈಸೂರಿನಲ್ಲಿ ಕಳೆದು ಮತ್ತೆ ಸಿಟಿಗೆ ವಾಪಸ್ ಆದಾಗ ಪೊಲೀಸ್ರಿಗೆ ಸಿಕ್ಕಿಬಿದ್ದಾರೆ.. ಸದ್ಯ ನಾಲ್ವರು ಆರೋಪಿಗಳನ್ನ ಬಂಧಿಸಿರೋ ವಿವೇಕನಗರ ಪೊಲೀಸ್ರು ಮತ್ತೋರ್ವ ಆರೋಪಿಗೆ ಬಲೆ ಬೀಸಿದ್ದಾರೆ…ವಿಚಾರಣೆ ವೇಳೆ ಸತೀಶ್ ಸಾಕಷ್ಟು ಟಾರ್ಚರ್ ಕೊಡ್ತಿದ್ದ ಅದಕ್ಕೆ ಕೊಲೆ ಮಾಡಿದ್ವಿ ಎಂದು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ…ರೌಡಿಸಂ ನೋಡ್ಕೊಂಡೇ ಬೆಳೆದ ಹುಡುಗ್ರು ರೌಡಿಯ್ನನೇ ಮುಗಿಸಿ ತಾವೂ ರೌಡಿಗಳಾಗ್ತಾರೆ. ಇನ್ನು ಈ ಆರೋಪಿಗಳಿಂದ ಇನ್ನೆಷ್ಟು ಜೀವಗಳು ಹೋಗ್ತಾವೂ ಇವ್ರು ಇನ್ಯಾರ ಮಚ್ಚಿಗೆ ಬಲಿಯಾಗ್ತಾರೋ ಗೊತ್ತಿಲ್ಲ.