ನಟ ಸೂರ್ಯ ಮತ್ತು ನಟಿ ಜ್ಯೋತಿಕಾ ಡಿವೋರ್ಸ್ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು. ಪ್ರೀತಿ ಮದುವೆಯಾದ ಜೋಡಿಯಿದೆ. ಅತ್ಯುತ್ತಮ ಸಿನಿಮಾಗಳನ್ನು ಜೊತೆಯಾಗಿ ನೀಡಿದ್ದಾರೆ. ಸೂರ್ಯ ಅವರ ಚಿತ್ರಗಳಿಗೆ ಜ್ಯೋತಿಕಾ ನಿರ್ಮಾಣ ಮಾಡಿದ್ದಾರೆ. ಆದರೂ, ಈ ಜೋಡಿ ಬೇರೆ ಆಗುತ್ತಿದೆ ಎನ್ನುವ ಸುದ್ದಿ ಆಗಿತ್ತು.
ಈ ಸುದ್ದಿಗೆ ಪೂರಕ ಎನ್ನುವಂತೆ ಜ್ಯೋತಿಕಾ ಅವರು ಮುಂಬೈನಲ್ಲಿ ವಾಸವಿದ್ದಾರೆ. ಅಲ್ಲಿಯೇ ಮನೆಯೊಂದನ್ನು ಖರೀದಿಸಿ, ಮಕ್ಕಳೊಂದಿಗೆ ಬದುಕುತ್ತಿದ್ದಾರೆ ಎನ್ನುವ ಮಾಹಿತಿಯೂ ಇತ್ತು. ಈ ಮಾಹಿತಿ ನಿಜವೂ ಆಗಿತ್ತು. ಸೂರ್ಯ ಚೆನ್ನೈನಲ್ಲಿದ್ದರೆ, ಜ್ಯೋತಿಕಾ ಮುಂಬೈನಲ್ಲಿದ್ದಾರೆ. ಹಾಗಾಗಿ ಸುದ್ದಿ ನಿಜ ಎಂದು ಹೇಳಲಾಗಿತ್ತು. ಈ ಎಲ್ಲ ಸುದ್ದಿಗಳಿಗೆ ಜ್ಯೋತಿಕಾ ಸ್ಪಷ್ಟನೆ ನೀಡಿದ್ದಾರೆ.
Govt Scheme: ಬ್ಯುಸಿನೆಸ್ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಲೋನ್.! ಸುಲಭವಾಗಿ ಪಡೆಯಿರಿ 10 ಲಕ್ಷ ರೂ.
ತಾವು ಮುಂಬೈನಲ್ಲಿ ಇರುವುದು ನಿಜ. ಆದರೆ, ಅದು ಡಿವೋರ್ಸ್ ಕಾರಣಕ್ಕೆ ಅಲ್ಲ. ಮುಂಬೈನಲ್ಲಿ ಕೆಲವು ಪ್ರಾಜೆಕ್ಟ್ ಮಾಡುತ್ತಿದ್ದಾರಂತೆ. ಓಡಾಟ ಕಷ್ಟ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕಾಗಿ ಮನೆ ಮಾಡಿರುವುದಾಗಿ ಹೇಳಿದ್ದಾರೆ. ಜ್ಯೋತಿಕಾ ಮತ್ತು ಸೂರ್ಯ ಮಾದರಿಯ ದಂಪತಿಗಳು. ಒಟ್ಟೊಟ್ಟಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆಯುವಂತಹ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಜೋಡಿ ಸುಖವಾಗಿ ಇರಲಿ ಎನ್ನೋದು ಅಭಿಮಾನಿಗಳ ಹಾರೈಕೆ ಆಗಿದೆ.