ಕಲಬುರ್ಗಿ:- ಪ್ರಧಾನಮಂತ್ರಿ ಆಗೋ ಅಭಿಲಾಷೆ ಬಗ್ಗೆ ಡೌಟ್ ಮಾಡ್ಕೊಂಡ್ರಾ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ..
ಹೌದು ನಿನ್ನೆ ಕಲಬುರಗಿಯ HKE ಸೊಸೈಟಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಖರ್ಗೆಯವರು ಆಡಿದ ಮಾತು ಒಂತರ ಹಂಗೇ ಇತ್ತು.ಖರ್ಗೆ ವೇದಿಕೆಗೆ ಬರ್ತಿದ್ದಂತೆ ಎದುರಿಗಿದ್ದ ಕಾರ್ಯಕರ್ತನೊಬ್ಬ ನಿಮ್ಮನ್ನ PM ಮಾಡ್ತೀವಿ ಅಂದಾಗ ಥಟ್ ಅಂತ ಉತ್ತರ ನೀಡಿದ ಖರ್ಗೆ MP ನೇ ಮಾಡ್ಲಿಲ್ಲ ಇನ್ನೇನು PM ಮಾಡ್ತೀರಿ ಅಂತ ಕಳೆದ ಲೋಕಸಭಾ ಚುನಾವಣೆಯ ಸೋಲಿನ ಕಹಿಯ ಮೆಲಕು ಹಾಕಿದ್ರು.
ಖರ್ಗೆ ಸಾಹೇಬ್ರ ಈ ಮಾತಿಗೆ ವೇದಿಕೆ ಮೇಲೆ ಇದ್ದವರೆಲ್ಲ ಫುಲ್ ಸೈಲೆಂಟ್ ಆದ್ರು..