ಕಲಬುರ್ಗಿ:- ಕಲ್ಯಾಣ ಕರ್ನಾಟಕದ ಸಚಿವರು, ಶಾಸಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು ತಯಾರಿ ಶುರುವಾಗಿದೆ. ಈ ನಿಟ್ಟಿನಲ್ಲಿ ಸಚಿವರು, ಶಾಸಕರಿಗೆ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಕೆಕೆಆರ್ಡಿ ಅನುದಾನದಲ್ಲಿ ಅಭಿವೃದ್ಧಿ ಮಾಡಬೇಕು. ನೀವು ಇದರ ಬಗ್ಗೆ ಗಮನ ಕೊಡಬೇಕು ಸೂಚಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಸಚಿವರು, ಶಾಸಕರಿಗೆ ವಾರ್ನ್ ಮಾಡಿದ್ದಾರೆ. ತಾಲೂಕಿಗೊಂದು ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಿ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ಗೆ ಖರ್ಗೆ ಪಾಠ ಮಾಡಿದರು. ಕೆಲಸ ಮಾಡಲಿಲ್ಲ ಅಂದ್ರೆ ಮನೆಗೆ ಕಳಿಸಲಾಗುತ್ತದೆ. ಮನೆಗೆ ಹೋಗಬೇಕಾಗುತ್ತೆ ನೋಡು ಎಂದು ಎಚ್ಚರಿಕೆ ನೀಡಿದರು. ಕೆಕೆಆರ್ಡಿ ಅನುದಾನದಲ್ಲಿ ಅಭಿವೃದ್ಧಿ ಮಾಡಬೇಕು. ನೀವು ಇದರ ಬಗ್ಗೆ ಗಮನ ಕೊಡಬೇಕು. ಕೆಲಸ ಮಾಡದಿದ್ರೆ ಸಚಿವಗಿರಿಗೆ ಕುತ್ತು ಎಂದು ಎಚ್ಚರಿಸಿದರು.
ಕೆಕೆಆರ್ ಡಿ ಅನುದಾನದಲ್ಲಿ ಹಣ ಇರುತ್ತದೆ. ನೀವು ಇದರ ಬಗ್ಗೆ ಗಮನ ಕೊಡಬೇಕು. ಇಲ್ಲಾಂದ್ರೆ ನಾವು ಒತ್ತಾಯ ಮಾಡಬೇಕಾಗುತ್ತದೆ. ಹೇ ಮಾಡಪ್ಪ ನೀ ಮಾಡು ಅಂತ ಹೇಳಬೇಕಾಗುತ್ತೆ. ಕೆಲಸ ಮಾಡಲಿಲ್ಲ ಅಂದ್ರೆ ಮನೆಗೆ ಹೋಗ್ತಿಯಾ ನೋಡು ಎನ್ನಬೇಕಾಗುತ್ತೆ. ಕೆಲಸ ಮಾಡದಿದ್ರೆ ಸಚಿವಗಿರಿಗೆ ಕುತ್ತು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಗೆ ಖರ್ಗೆ ಪರೋಕ್ಷವಾಗಿ ಸುಳಿವು ಕೊಟ್ಟರು.