ಬಿಗ್ ಬಾಸ್ ಮನೆಯಲ್ಲಿ 6 ಫೈನಲಿಸ್ಟ್ಗಳ ಪೈಕಿ ತುಕಾಲಿ ಸಂತೋಷ್ ಅವರು ಔಟ್ ಆಗಿದ್ದಾರೆ. ಅವರು ಎಮಿಲಿನೇಟ್ ಆಗಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ‘ನಿಮ್ಮ ಬಿಗ್ ಬಾಸ್ ಪಯಣ ಇಲ್ಲಿಗೆ ಅಂತ್ಯ’ ಎಂದು ಹೇಳಿದಾಗ ತುಕಾಲಿ ಸಂತೋಷ್ ಅವರು ಹೆಚ್ಚೇನೋ ಬೇಸರ ಮಾಡಿಕೊಳ್ಳಲಿಲ್ಲ.
ನಗುನಗುತ್ತಲೇ ಅವರು ದೊಡ್ಮನೆ ತೊರೆದಿದ್ದಾರೆ. ಅಷ್ಟಕ್ಕೂ ಈ ಜರ್ನಿಯಲ್ಲಿ ಅವರು ಮಾಡಿದ ತಪ್ಪು ಏನು? ಫಿನಾಲೆ ತನಕ ಬಂದವರು ಟ್ರೋಫಿ ಗೆಲ್ಲಲು ಯಾಕೆ ಸಾಧ್ಯವಾಗಲಿಲ್ಲ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..
ತುಕಾಲಿ ಸಂತೋಷ್ ಅವರಿಗೂ ಬಿಗ್ ಬಾಸ್ ಟ್ರೋಫಿ ಗೆಲ್ಲುವ ಸಾಮರ್ಥ್ಯ ಇತ್ತು. ಆದರೆ ಅವರು ಸರಿಯಾಗಿ ಬಳಕೆ ಮಾಡಿಕೊಳ್ಳಲಿಲ್ಲ ಎನ್ನಬಹುದು. ಬಿಗ್ ಬಾಸ್ಗೆ ಶೋಗೆ ಬರುವುದಕ್ಕೂ ಮೊದಲು ಕಿರುತೆರೆಯ ಕಾಮಿಡಿ ಶೋಗಳ ಮೂಲಕ ಜನರಿಗೆ ಅವರ ಪರಿಚಯ ಆಗಿತ್ತು. ತಮ್ಮ ಶಕ್ತಿಯೇ ಕಾಮಿಡಿ ಎಂಬುದನ್ನು ಸಂತೋಷ್ ಅವರು ಹೆಚ್ಚು ಅರ್ಥ ಮಾಡಿಕೊಳ್ಳಲಿಲ್ಲ. ಆಗೊಮ್ಮೆ ಈಗೊಮ್ಮೆ ಮಾತ್ರ ನಗಿಸುತ್ತಿದ್ದರು. ಉಳಿದ ಸಮಯದಲ್ಲಿ ಸುಮ್ಮನಿರುತ್ತಿದ್ದರು. ಅವರಿಗೆ ಕಡಿಮೆ ವೋಟ್ ಬರಲು ಇದು ಪ್ರಮುಖ ಕಾರಣ.
ಬಿಗ್ ಬಾಸ್ ಮನೆಯಲ್ಲಿ ಪ್ರತಿ ಮಾತಿಗೂ ಮಹತ್ವ ಇರುತ್ತದೆ. ಹಾಗಂತ ಬರೀ ಮಾತನಾಡಿಕೊಂಡೇ ಕಾಲ ಕಳೆದರೆ ಅದಕ್ಕೆ ಅರ್ಥ ಸಿಗುವುದಿಲ್ಲ. ಬಿಗ್ ಬಾಸ್ ಆಟದಲ್ಲಿ ತುಕಾಲಿ ಸಂತೋಷ್ ಅವರು ಮಾತಿನ ಕಾರಣದಿಂದಲೇ ಸ್ವಲ್ಪ ಅಪಖ್ಯಾತಿ ಪಡೆದರು. ವರ್ತೂರು ಸಂತೋಷ್ ಜೊತೆ ಸೇರಿ, ಬೀನ್ ಬ್ಯಾಗ್ ಮೇಲೆ ಕುಳಿತು ಗಂಟೆಗಟ್ಟಲೆ ಮಾತನಾಡಿದರು.
ತುಕಾಲಿ ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲಿ ಗಾಸಿಪ್ ಮಾಡುತ್ತಾರೆ ಎಂಬುದು ಬಹುತೇಕರ ಅಭಿಪ್ರಾಯ. ಬೀನ್ ಬ್ಯಾಗ್ ಮೇಲೆ ಕುಳಿತು ಬೇರೆಯವರ ವಿಷಯವನ್ನೇ ಅವರು ಹೆಚ್ಚಾಗಿ ಮಾತನಾಡುತ್ತಿದ್ದರು. ಅವರಿಗೆ ವರ್ತೂರು ಸಂತೋಷ್ ಸಾಥ್ ನೀಡುತ್ತಿದ್ದರು. ಅವರಿವರ ಬಗ್ಗೆ ಮಾತನಾಡುತ್ತಾ, ತಮ್ಮ ಆಟದ ಕಡೆಗೆ ಅವರು ಹೆಚ್ಚು ಗಮನ ನೀಡಲಿಲ್ಲ.
ಬಿಗ್ ಬಾಸ್ ಶೋನಲ್ಲಿ ತುಕಾಲಿ ಸಂತೋಷ್ ಅವರು ಎಲ್ಲರ ಜೊತೆ ಬೆರೆತಿದ್ದು ಕಡಿಮೆ. ಅದೇ ಕಾರಣಕ್ಕೋ ಏನೋ ಮನೆಯ ಹಲವು ಸದಸ್ಯರು ಅವರನ್ನು ಫೇಕ್ ಎಂದು ಕರೆದರು. ಅವರು ಸ್ನೇಹ ಮಾಡಿದ್ದು ವರ್ತೂರು ಸಂತೋಷ್ ಜೊತೆ ಮಾತ್ರ. ಇನ್ನುಳಿದ ಸದಸ್ಯರ ಜೊತೆ ಅವರು ಅಂತರ ಕಾಯ್ದುಕೊಂಡಿದ್ದರು. ಸಂಗೀತಾ ಶೃಂಗೇರಿ ಜೊತೆ ಅವರ ಸ್ನೇಹ ಬೆಳೆಯಲೇ ಇಲ್ಲ.