ಬೆಂಗಳೂರು:- ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ಕ್ರೌರ್ಯ ಮೆರೆದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಇನ್ನೂ ನಾಯಿ ಮೇಲೆ ಕಾರು ಹತ್ತಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪಾರ್ಕಿಂಗ್ ಜಾಗದಲ್ಲಿ ನಾಯಿ ಮಲಗಿತ್ತು. ಈ ವೇಳೆ ನಾಯಿಯ ಮೇಲೆ ಕಾರಿನ ಮುಂದಿನ ಟಯರ್ ಹರಿದಿದೆ. ನಾಯಿಯ ಮೇಲೆ ಕಾರು ಹೋಗಿದೆ ಅಂತ ಗೊತ್ತಿದ್ದರು ಸಹ ವಾಹನವನ್ನು ಚಾಲಕ ಚಲಾಯಿಸಿದ್ದಾನೆ. ಮಿಷನ್ ರೋಡ್ ನಲ್ಲಿ ಇದೇ ತಿಂಗಳ 25 ನೇ ತಾರೀಖಿನಂದು ನಡೆದಿರುವ ಘಟನೆ ಇದಾಗಿದ್ದು, ಕಾರು ಹತ್ತಿ ಸ್ವಲ್ಪ ಸಮಯದಲ್ಲೇ ನಾಯಿ ಸಾವನ್ನಪ್ಪಿದೆ.
ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.