ಸಾಮಾನ್ಯವಾಗಿ ನಾಯಿ ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಹೀಗೆ ನಾಯಿ ಮೇಲೆ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದ ಮಹಿಳೆ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ.
ನಾಯಿಯ ಮೇಲೆ ಅತಿಯಾದ ಪ್ರೀತಿಯನ್ನು ಹೊಂದಿದ್ದ ಈ ಮಹಿಳೆ ಪ್ರಾರಂಭದಲ್ಲಿ ಪ್ರತಿದಿನ ಬಿಡುವಿನ ಸಮಯದಲ್ಲಿ ತನ್ನ ನಾಯಿಯೊಂದಿಗೆ ವಾಕಿಂಗ್ ಹೋಗುತ್ತಿದ್ದಳು. ಆದರೆ ಈ ಅಭ್ಯಾಸವನ್ನೇ ಈಗ ವೃತ್ತಿಯನ್ನಾಗಿಸಿದ್ದಾಳೆ. ಕಾಫಿ ಕೆಫೆಯಲ್ಲಿ ಕೆಲಸಮಾಡುತ್ತಿದ್ದ ನಾರ್ವಿಚ್ ನಿವಾಸಿ ಗ್ರೇಸ್ ಬೆಣ್ಣೆ ಬರಿಸ್ಟಾ(28) ತನ್ನ ಈ ಕೆಲಸವನ್ನು ತೊರೆದು ಶ್ವಾನ ಪ್ರೀತಿಯ ಹವ್ಯಾಸವನ್ನು ವೃತ್ತಿಯನ್ನಾಗಿಸಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾಳೆ.
ಒಂದು ದಿನ ಅವಳ ಸ್ನೇಹಿತ ತಮಾಷೆಯಾಗಿ ನೀನು ನಿನ್ನ ನಾಯಿಯನ್ನು ವಾಕಿಂಗ್ಗೆ ಕರೆದುಕೊಂಡು ಹೋಗುವಾಗ, ನನ್ನ ಮನೆಯ ನಾಯಿಯನ್ನು ಏಕೆ ಕರೆದುಕೊಂಡು ಹೋಗಬಾರದು ಎಂದು ಹೇಳಿದ್ದಾರೆ. ಇಲ್ಲಿಂದ ಪ್ರಾರಂಭವಾದ ಈಕೆಯ ವೃತ್ತಿ ಇದೀಗಾ ದಿನದಲ್ಲಿ ನೂರಾರು ನಾಯಿಗಳನ್ನು ವಾಕಿಂಗ್ಗೆ ಕರೆದುಕೊಂಡು ಹೋಗುವಷ್ಟರ ಮಟ್ಟಿಗೆ ಬಂದು ತಲುಪಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.
2019 ರಲ್ಲಿ, ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವ ವೃತ್ತಿಯನ್ನು ಪ್ರಾರಂಭಿಸಲು ಕಂಪನಿಯನ್ನು ತೆರೆದಳು. ಅವಳು ಪ್ರತಿದಿನ ಆರು ಗಂಟೆಗಳ ಕಾಲ ನಾಯಿಗಳನ್ನು ವಾಕಿಂಗ್ಗೆ ಕರೆದುಕೊಂಡು ಹೋಗುತ್ತಾಳೆ. ಅದಕ್ಕೆ ಪ್ರತಿಯಾಗಿ ನಾಯಿ ಮಾಲೀಕರು ಅವಳಿಗೆ ಹಣವನ್ನು ನೀಡುತ್ತಾರೆ. ಆರಂಭದಲ್ಲಿ ಕೇವಲ ಎರಡು-ನಾಲ್ಕು ಗ್ರಾಹಕರನ್ನು ಹೊಂದಿದ್ದ ಈಕೆ ಈಗ ನೂರಾರು ಗ್ರಾಹಕರನ್ನು ಹೊಂದಿದ್ದಾಳೆ. ಇದರಿಂದಾಗಿ ಅವರು 42 ಸಾವಿರ ಪೌಂಡ್ ಗಳಿಸುತ್ತಾಳೆ. ಖರ್ಚು ತೆಗೆದರೆ ಸುಮಾರು 34 ಲಕ್ಷ ರೂ. ಸಂಪಾದಿಸುತ್ತಾಳೆ ಎಂದು ಹೇಳಲಾಗಿದೆ.