ದೇವನಹಳ್ಳಿ:- ರೋಟರಿ ಸಂಸ್ಥೆಗೆ ಸೇರಿದ ಶಾಲಾ ಜಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಮುಂದಾದ ಸರ್ಕಾರದ ವಿರುದ್ಧ ಮಕ್ಕಳು ಹಾಗೂ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹೌದು, ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿರುವ ರೋಟರಿ ಶಾಲೆಯ ಆವರಣ ಪುರಸಭೆಗೆ ಸೇರಿದ್ದು ಎಂದು ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ. 43 ವರ್ಷಗಳಿಂದ ರೋಟರಿ ಶಾಲೆ ನಡೆಯುತ್ತಿದ್ದು, 1983 ರಲ್ಲಿ ಶಾಲೆ ಮುಂದಿನ ಜಾಗವನ್ನ ಪುರಸಭೆ ಮಕ್ಕಳ ಮೈದಾನಕ್ಕೆ ರೇಸೋಲೆಷನ್ ಮಾಡಿತ್ತು,
ಇದೀಗ ಅದೇ ಜಾಗವನ್ನ ಪುರಸಭೆ ಸರ್ಕಾರಕ್ಕೆ ಸೇರಬೇಕು ಅಂತಾ ಇಂದಿರಾ ಕ್ಯಾಂಟಿನ್ ನಿರ್ಮಾಣ ಸರ್ಕಾರ ಕ್ಕೆ ಕೈಹಾಕಿದೆ. ಜೆಸಿಬಿ, ಪುರಸಭೆ ವಾಹನಗಳ ನಿಲ್ಲಿಸಿ ಶಾಲೆಗೆ ಹೋಗದಂತೆ ತಡೆ ಹಿಡಿಯಲಾಗಿದೆ. ನೆನ್ನೆಯಿಂದ ಶಾಲಾ ಆವರಣವನ್ನ ತೆರವು ಮಾಡಲು ಪುರಸಭೆ ಮುಂದಾಗಿದೆ.
ಹೀಗಾಗಿ ಪುರಸಭೆ ಕ್ರಮ ಖಂಡಿಸಿ ರೋಟರಿ ಶಾಲಾ ಮಕ್ಕಳು ರಾತ್ರಿಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇದೀಗ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಿದ್ರೆ ಶಾಲೆ ಹೋಗಲು ಹಾಗದ ಪರಿಸ್ಥಿತಿ ರೋಟಾರಿ ಶಾಲೆ ಮಕ್ಕಳದ್ದು, ಹೀಗಾಗಿ ವಿವಾದಿತ ರೋಟರಿ ಶಾಲಾ ಆವರಣದ ಬಳಿ ಮಕ್ಕಳ ಪೋಷಕರು ಜಮಾಯಿಸಿದ್ದಾರೆ.
ಸ್ಥಳದಲ್ಲಿ ವಿಜಯಪುರ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟಿನ್ ಶಾಲಾ ಆವರಣದಲ್ಲಿ ನಿರ್ಮಾಣ ಮಾಡದಂತೆ ಪೋಷಕರು ಹಾಗೂ ಮಕ್ಕಳು ಒತ್ತಾಯ ಮಾಡಿದ್ದಾರೆ.