ಕೊಪ್ಪಳ:- ಮೋದಿ ಪ್ರಧಾನಿಯಾಗಲು ಬಿಜೆಪಿ ಜೊತೆ ಹೊಂದಾಣಿಕೆಗೆ ಕೆಆರ್ಪಿಪಿ ಸಿದ್ಧ ಎಂದು ಕೆಆರ್ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮೋದಿ ಮತ್ತೆ ಪ್ರಧಾನಿಯಾಗಬೇಕು. ಮೋದಿ ಪ್ರಧಾನಿಯಾಗಲು ಹೊಂದಾಣಿಕೆಗೆ ಕೆಆರ್ಪಿಪಿ ಸಿದ್ಧ. ನಮ್ಮ ಪಕ್ಷದಿಂದ ಗೆದ್ದ ಮೇಲೆ ಬಿಜೆಪಿಗೆ ಸಪೋರ್ಟ್ ಮಾಡುತ್ತೇನೆ. ಬಿಜೆಪಿ ನಾಯಕರು ನನ್ನ ಜೊತೆ ಚರ್ಚೆ ಮಾಡುತ್ತಿದ್ದಾರೆ. ಕೆಆರ್ಪಿಪಿಯಿಂದ 4-5 ಕಡೆ ಅಭ್ಯರ್ಥಿ ಹಾಕಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆಯಾದ ಬಳಿಕ ಈಗ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಸಂಪರ್ಕ ಮಾಡುವ ಪ್ರಯತ್ನ ನಡೆದಿದೆ. ಕೊಪ್ಪಳದಿಂದ ರೆಡ್ಡಿ ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗಿದೆ.
ಆಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಲೋಕಸಭಾ ಚುನಾವಣಾ ದೃಷ್ಟಿ ಇಟ್ಟುಕೊಂಡು ಬಿಜೆಪಿ ಸೆಳೆಯುವ ಪ್ರಯತ್ನ ಮಾಡಿದೆ. ಕಲ್ಯಾಣ ಕರ್ನಾಟಕ ಭಾಗದ ಮೂರ್ನಾಲ್ಕು ಲೋಕಸಭಾ ಕ್ಷೇತ್ರಕ್ಕೆ ಲಾಭವಾಗುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿದೆ. ಆದರೆ ಜನಾರ್ದನ ರೆಡ್ಡಿ ಬಿಜೆಪಿಯ ನೇರಾ ನೇರ ಬೇಡಿಕೆಗೆ ಇನ್ನೂ ಪೂರ್ಣ ಒಪ್ಪಿಗೆ ಸೂಚಿಸಿಲ್ಲ.
ಕೆಆರ್ ಪಿಪಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡುವ ಬೇಡಿಕೆಯನ್ನು ಬಿಜೆಪಿ ನಾಯಕರು ಜನಾರ್ದನ ರೆಡ್ಡಿ ಮುಂದೆ ನೇರವಾಗಿ ಇಟ್ಟಿದ್ದಾರೆ. ವಿಲೀನ ಮಾಡುವ ಬದಲು ಸದ್ಯಕ್ಕೆ ಸಕಾರಾತ್ಮಕವಾಗಿ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.