ಬಿಗ್ ಬಾಸ್ ಸೀಸನ್ 10 ರ ಫಿನಾಲೆ ವೇದಿಕೆಯ ಮೇಲೆ ಸುದೀಪ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಹತ್ತು ಸೀಸನ್ನಲ್ಲಿ ಇಷ್ಟು ಸುದ್ದಿ ಮಾಡಿದ ಸೀಸನ್ ಬೇರೆ ಇಲ್ಲ ಎಂದು ಸ್ವತಃ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿದ್ದ ಸಂಗತಿಯನ್ನು ಸುದೀಪ್ ರಿವೀಲ್ ಮಾಡುತ್ತಿದ್ದ ಹಾಗೆಯೇ ಮನೆಯೊಳಗಿನ ಉಳಿದ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ ಮೂಡಿದರೆ, ವರ್ತೂರು ಸಂತೋಷ್ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಹೊರಗೆ ಕೂತಿದ್ದ ವರ್ತೂರು ಸಂತೋಷ್ ಅಮ್ಮನೂ ಸೆರಗಿನಲ್ಲಿ ಕಣ್ಣೀರು ಒರೆಸಿಕೊಂಡರು. ಹುಲಿ ಉಗುರಿನ ಕೇಸ್ ಬಗ್ಗೆ ಮಾತನಾಡುತ್ತಿದ್ದಂತೆ ಸಂತೋಷ್ ತಾಯಿ ಭಾವುಕರಾದರು.
ಡ್ರೋನ್ ಪ್ರತಾಪ್ ತಾಯಿ, ನಮ್ಮ ಮಗನನ್ನು ನಮಗೆ ಕೊಟ್ಟಿದ್ದೀರಾ. ಈ ವೇದಿಕೆಗೆ ಚಿರಋಣಿ ಎಂದು ಭಾವುಕರಾಗಿದ್ದಾರೆ. ಎಲ್ಲರ ಮುಖದಲ್ಲಿಯೂ ಬಿಗ್ ಬಾಸ್ ವೇದಿಕೆಯ ಕುರಿತು ಕೃತಜ್ಞತೆಯ ಭಾವ ತುಂಬಿದೆ. ಇನ್ನಷ್ಟು ಪರ್ಫಾರ್ಮೆನ್ಸ್, ಕಲರ್ಫುಲ್ ಡಾನ್ಸ್, ಕಚಗುಳಿಯ ಮಾತುಕತೆ ಎಲ್ಲವೂ ತುಂಬಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಫಿನಾಲೆ ಇಂದು ಮತ್ತು ನಾಳೆ ಜಿಯೊ ಸಿನಿಮಾದಲ್ಲಿ ಮತ್ತು ವಾಹಿನಿಯಲ್ಲಿ ಸಂಜೆ 7.30ರಿಂದ ಪ್ರಸಾರವಾಗಲಿದೆ