ಚಾಮರಾಜನಗರ:- ಕನಕ ಜಯಂತಿ ಆಚರಣೆ ವೇಳೆ ಭಾರಿ ಹೈಡ್ರಾಮಾ ನಡೆದ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಜರುಗಿದೆ.
ಸಿಎಂ ಪುತ್ರ ಯತೀಂದ್ರ ವೇದಿಕೆ ಮೇಲೆ ಮಾತಾಡುವಾಗ ಯುವಕನೊಬ್ಬ ಬಾಯಿಗೆ ಬಂದಂತೆ ಬೈದು ಬೈಕ್ನಲ್ಲಿ ಎಸ್ಕೇಪಾಗಿದ್ದಾರೆ. ಕನಕ ಜಯಂತಿ ಆಚರಣೆ ವೇಳೆ ಯತೀಂದ್ರ ಸಿದ್ದರಾಮಯ್ಯ ರಾಮಮಂದಿರದ ಬಗ್ಗೆ ಮಾತನಾಡುತ್ತಿದ್ದರು. ಬಿಜೆಪಿಯವರು ರಾಮನನ್ನ ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ ಅಂತಿದ್ದರು. ಈ ವೇಳೆ ಬುಲೆಟ್ಬೈಕ್ನಲ್ಲೇ ಸೀದಾ ಮೈದಾನದೊಳಕ್ಕೆ ಬಂದ ಯುವಕ ರಂಜಿತ್ ಎಂಬಾತ ಯತೀಂದ್ರರನ್ನ ಬಾಯಿಗೆ ಬಂದಂತೆ ಬೈದು ಬೈಕ್ನಲ್ಲಿ ಎಸ್ಕೇಪ್ ಆಗಿದ್ದ. ಆತ ಯಾರು ಅಂತ ಹುಡುಕೋಷ್ಟರಲ್ಲಿ ಮತ್ತೆ ಅದೇ ಯುವಕ ಬೈಕ್ನಲ್ಲಿ ಮೈದಾನಕ್ಕೆ ಬಂದಿದ್ದಾನೆ. ಕೂಡಲೇ ಅಲ್ಲಿದ್ದ ಪೊಲೀಸರು ಯುವಕನ್ನು ಹಿಡಿದುಕೊಂಡು ವಶಕ್ಕೆ ಪಡೆದಿದ್ದಾರೆ. ಯುವಕನ್ನ ವಶಕ್ಕೆ ಪಡೆದ ಪೊಲೀಸರು ದರದರನೇ ಎಳೆದೊಯ್ದಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ವಿರುದ್ದ ಅವಾಚ್ಯ ಶಬ್ದದಿಂದ ನಿಂದನೆ ಪ್ರಕರಣ ಸಂಬಂಧ ಸಚಿವ ಭೈರತಿ ಸುರೇಶ್, ನಿಂದನೆ ಮಾಡಿದ ವ್ಯಕ್ತಿಯನ್ನು ಬಂಧಿಸುವಂತೆ ಎಸ್ಪಿಗೆ ವೇದಿಕೆ ಮೇಲೆಯೇ ಸೂಚನೆ ನೀಡಿದ್ದಾರೆ.
ಇದು ಪ್ರಜಾಪ್ರಭುತ್ವ ಅಶ್ಲೀಲ ಪದಗಳಿಂದ ನಿಂದಿಸುವುದು ಸರಿ ಅಲ್ಲ, ಅವನು ಯಾರೇ ಆಗಲಿ ಮೊದಲು ಅರೆಸ್ಟ್ ಮಾಡಿ. ದೂರವಾಣಿ ಮೂಲಕ ಎಸ್ಪಿ ಜೊತೆ ಮಾತನಾಡಿದ ಸಚಿವ ಭೈರತಿ ಸುರೇಶ್, ಬುಲೆಟ್ ನಲ್ಲಿ ಅವನ್ಯಾವನೋ ರೌಡಿ ಫೆಲೋ ಬಂದಿದ್ದ. ನನ್ನ ಮುಂದೆಯೇ ನಮ್ಮ ಸಾಹೇಬರ ಮಗ ಯತೀಂದ್ರನನ್ನು ಕೆಟ್ಟದಾಗಿ ಬೈಯ್ದುಬಿಟ್ಟು ಹೋದ. ಅವನನ್ನು ಕೂಡಲೇ ಅರೆಸ್ಟ್ ಮಾಡಿ, ಇಲ್ಲದಿದ್ದರೆ ಲಾ ಅಂಡ್ ಆರ್ಡರ್ ಪ್ರಾಬ್ಲಂ ಆಗುತ್ತೆ ಎಂದು ಜಿಲ್ಲಾ ಎಸ್ಪಿಗೆ ಸೂಚನೆ ಕೊಟ್ಟ ಘಟನೆ ಜರುಗಿದೆ.