ಬೆಳಗಾವಿ:– ಗ್ರಾ. ಪಂ. ಡಾಟಾ ಎಂಟ್ರಿ ಆಪರೇಟರ್ ನಿಂದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದಲ್ಲಿ ಜರುಗಿದೆ.
ಡಾಟಾ ಎಂಟ್ರಿ ಆಪರೇಟರ್ ಸಂತೋಷ ಪಾಟೀಲ್ ಅವರು ಶೂ ಧರಿಸಿ ಧ್ವಜ ಕಟ್ಟೆ ಹತ್ತಿ ಧ್ವಜದ ಹಗ್ಗ ಕಟ್ಟಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಟಗುಂದಿ ಗ್ರಾ. ಪಂ ನಲ್ಲಿ ಘಟನೆ ಜರುಗಿದ್ದು, ಸಂತೋಷ ಪಾಟೀಲ್ ವಿರುಧ್ಧ ಸಾರ್ಜನಿಕ ವಲಯದಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗಿದೆ. ಕೂಡಲೇ ಶಿಸ್ತು ಕ್ರಮ ಜರುಗಿಸಲು ಆಗ್ರಹಿಸಲಾಗಿದೆ.
ವರದಿ:- ಬಾಳು ತೇರದಾಳ AIN NEWS ಬೆಳಗಾವಿ