ರಿಷಬ್ ಶೆಟ್ಟಿ ಅವರಿಗೆ ನಾಯಕಿಯಾಗಿ ‘ಕಾಂತಾರ’ ಮೂಲಕ ಸಕ್ಸಸ್ ಕಂಡ ನಟಿ ಸಪ್ತಮಿ ಇದೀಗ ಬಹುಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಇದರ ನಡುವೆ ಕಿರುತೆರೆಗೆ ಸಪ್ತಮಿ ಹಾಜರಿ ಹಾಕಿದ್ದಾರೆ. ‘ಶ್ರೀರಸ್ತು ಶುಭಮಸ್ತು’ ಸೀರಿಯಲ್ ಇದೀಗ ಮಹಾ ಸಂಚಿಕೆ ನಡೆಯುತ್ತಿದೆ. ಇದರಲ್ಲಿ ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಸಪ್ತಮಿ ತಂಡಕ್ಕೆ ಸಾಥ್ ನೀಡಿದ್ದಾರೆ.
ಸೀರಿಯಲ್ ಪ್ರಚಾರಕ್ಕೆ ಸಪ್ತಮಿ ಬಂದಿದ್ದಾರೆ. ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ಪಾತ್ರಗಳ ನಿರೂಪಣೆ ಮಾಡಿದ್ದಾರೆ. ಸೀರಿಯಲ್ನ ನಾಯಕಿ ತುಳಸಿ ಪಾತ್ರಧಾರಿ ಅಂದರೆ ಸುಧಾರಾಣಿ ಅವರು ಮಕ್ಕಳ ಖುಷಿಗಾಗಿ ಎದುರಾಳಿಗಳ ಕುತಂತ್ರಕ್ಕೆ ಮಣಿದು ಮನೆಯಿಂದ ಹೊರಹೋಗುತ್ತಾರೆ. ಮುಂದೇನು ಆಗುತ್ತೆ? ನಾಯಕಿ ಮತ್ತೆ ಮರಳಿ ಮನೆಗೆ ಬರುತ್ತಾರಾ ಎಂಬುದು ಸದ್ಯದ ಟ್ವಿಸ್ಟ್. ಇದನ್ನು ಸಪ್ತಮಿ ನಿರೂಪಣೆ ಮಾಡುವ ಮೂಲಕ ಸೀರಿಯಲ್ ಕುರಿತು ಮತ್ತಷ್ಟು ಕುತೂಹಲ ಮೂಡುವಂತೆ ಮಾಡಿದ್ದಾರೆ. ಸದ್ಯ ರಿವೀಲ್ ಆಗಿರೋ ಸಪ್ತಮಿ ಪ್ರೋಮೋ ಸದ್ದು ಮಾಡುತ್ತಿದೆ.
ಕಾಂತಾರ’ ಚಿತ್ರದ ಸಕ್ಸಸ್ ಅನ್ನು ನಟಿ ಸದುಪಯೋಗಪಡಿಸಿಕೊಂಡಿದ್ದಾರೆ. ಕನ್ನಡದ ಜೊತೆ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲಿ ಸಪ್ತಮಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ನಲ್ಲಿಯೂ ಕನ್ನಡದ ಬೆಡಗಿಗೆ ಸಖತ್ ಬೇಡಿಕೆಯಿದೆ