ಬೆಂಗಳೂರು :-ಪೂರ್ವ ತಾಲ್ಲೂಕಿನಲ್ಲಿ ಇಂದು ದೇಶದಾದ್ಯಂತ 75ನೇ ಗಣರಾಜ್ಯೋತ್ಸವ ದಿನವನ್ನು ಅದ್ದೂರಿಯಿಂದ ಆಚರಣೆ ಮಾಡಲಾಯಿತು.ಕ್ಷೇತ್ರದ ಕೆ.ಆರ್.ಪುರ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಿರಂಗಾ ರಾರಾಜಿಸಿತು.ಬೆಂಗಳೂರು ಪೂರ್ವ ತಾಲ್ಲೂಕು ದಂಡಾಧಿಕಾರಿ ರವಿ ಅವರು ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಬಾನಂಗಳಕ್ಕೆ ತಿವರ್ಣ ಬಣ್ಣದ ನೂರಾರು ಬಲೂನ್ ಗಳನ್ನ ಹಾರಿಸಿದರು.
ಶಾಸಕ ಬೈರತಿ ಬಸವರಾಜ್,ಮತ್ತು ತಾಲ್ಲೂಕು ದಂಡಾಧಿಕಾರಿ ರವಿ ಅವರು ಪೊಲೀಸರಿಂದ ತೆರೆದ ವಾಹನದ ಮೂಲಕ ಗೌರವ ವಂದನೆ ಸ್ವೀಕರಿಸಿದರು.
ಗಣರಾಜ್ಯೋತ್ಸವ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಭೈರತಿ ಬಸವರಾಜ್
ನಾವೆಲ್ಲ ಉನ್ನತ ಸ್ಥಾನದಲ್ಲಿ ಬಾಳಲು ನಮಗೆ ಸಿಕ್ಕಂತ ಅವಕಾಶಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ಪ್ರತಿಯೊಬ್ಬರೂ ಇದನ್ನು ಅರಿತು ನಡೆಯಬೇಕು. ನಮಗೆ ಕೊಟ್ಟಂತಹ ಸಂವಿಧಾನದ ವಿಧಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಿಳಿಸಿದರು.
ಪರಕೀಯರ ಆಡಳಿತದ ಮುಷ್ಠಿಯಲ್ಲಿದ್ದ ಭಾರತ ಹಲವು ಮಹನೀಯರ ಹೋರಾಟ, ಪ್ರಾಣ ತ್ಯಾಗ, ಬಲಿದಾನದ ಫಲವಾಗಿ ಸ್ವಾತಂತ್ರ್ಯಗೊಂಡಿತು. ಸ್ವಾತಂತ್ರ್ಯ ಬಳಿಕ ದೇಶದಲ್ಲಿ ಆಹಾರದ ಕೊರತೆ, ಧಾರ್ಮಿಕ ಸಂಘರ್ಷ ಮನೆ ಮಾಡಿತ್ತು. ವಿಶಿಷ್ಟ ನೆಲ, ಜಲ, ಸಂಸ್ಕೃತಿ ಭಾಷೆಯನ್ನು ಹೊಂದಿರುವ ಭಾರತದಲ್ಲಿ ಪ್ರಬಲ ಕಾನೂನು ವ್ಯವಸ್ಥೆ ಅಗತ್ಯವಿತ್ತು. ಇದನ್ನು ಮನಗಂಡ ಅಂದಿನ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರು ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಂವಿಧಾನ ಕರಡು ಸಮಿತಿ ರಚನೆ ಮಾಡಿದರು. ಬಳಿಕ ಅರ್ಥಪೂರ್ಣ ಲಿಖಿತ ಸಂವಿಧಾನ ರಚನೆಯಾಗಿ 1950ರ ಜ.26 ರಂದು ಅಂಗೀಕರಿಸಿ ಸಮರ್ಪಣೆ ಮಾಡಿಕೊಳ್ಳಲಾಯಿತು ಎಂದರು. ಭಾರತದ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯಿಂದ ಬದಕುಲು ಕಾರಣ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದಿಂದ ಎಂದು ತಿಳಿಸಿದರು.
ಶಾಲಾ ಕಾಲೇಜು ಮಕ್ಕಳುನಡೆಸಿಕೊಟ್ಟ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಸೆಳೆಯಿತು.ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು, ವಿವಿಧ ಸಮಾಜ ಸೇವೆ ಒಳಗೊಂಡ ಕ್ಷೇತ್ರಗಳ ಜಿಲ್ಲೆಯ ಸಾಧಕರು, ಸಂಘ-ಸಂಸ್ಥೆಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ಕೆಆರ್ ಪುರ ತಾಲ್ಲೂಕು ದಂಡಾಧಿಕಾರಿ ರವಿ , ಇಒ ವಸಂತ್ ಕುಮಾರ್, ಬಿಇಒ ರಾಮಮೂರ್ತಿ, ಟಿಹೆಚ್ ಒ ಕೋಮಲ, ಪಾಲಿಕೆ ನಾಮನಿರ್ದೆಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ಇನ್ಸ್ ಪೆಕ್ಟರ್ ಮಂಜುನಾಥ್,
ಮುಖಂಡರಾದ ಶಿವಪ್ಪ, ಭಟ್ಟರಹಳ್ಳಿ ಮಂಜು, ರವಿ, ಡೀಸಲ್ ಮಂಜು, ಕೃಷ್ಣ , ಅನೀಲ್ ಮತ್ತಿತರರಿದ್ದರು.