ವಿಜಯಪುರ :- ಶೆಟ್ಟರ್ ಬಿಜೆಪಿಗೆ ಮರಳಿರುವುದು ಅವರ ಘನತೆಗೆ ಶೋಭೆ ತರಲ್ಲ ಎಂದು ಸಚಿವ Mb ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಶೆಟ್ಟರ್ ಅವರಿಗೆ ಅನ್ಯಾಯವಾಗಿದೆ ಅಂತ ಶಾಮನೂರು ಶಿವಶಂಕರಪ್ಪ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ರಂದೀಪ್ ಸುರ್ಜೆವಾಲ ಮತ್ತು ತಾನು ಸೇರಿ ಕಾಂಗ್ರೆಸ್ ಕರೆತಂದಿದ್ದೆವು, ಅದರೆ ತಮಗ್ಯಾರಿಗೂ ವಾಸನೆ ಕೂಡ ಹತ್ತದಂತೆ ಅವರು ಬಿಜೆಪಿಗೆ ಪಲಾಯನಗೈದಿದ್ದಾರೆ ಎಂದು ಪಾಟೀಲ್ ಹೇಳಿದರು.
ಶೆಟ್ಟರ್ ಅವರಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಆಮಿಶವೊಡ್ಡಲಾಗಿದೆಯೋ ಒತ್ತಡ ಹೇರಲಾಗಿತ್ತೋ ಅಂತ ಅವರೇ ಹೇಳಬೇಕು ಎಂದ ಪಾಟೀಲ್, ಜಗತ್ತು ನಂಬಿಕೆ ವಿಶ್ವಾಸದ ಮೇಲೆ ನಡೆಯುತ್ತಾದರೂ ಇಂಥ ಪ್ರಸಂಗಗಳು ನಡೆಯುತ್ತಿರುತ್ತವೆ ಎಂದರು. ಲಕ್ಷ್ಮಣ ಸವದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ, ಅವರು ಹಿರಿಯ ನಾಯಕ ಮತ್ತು ಉಪ ಮುಖ್ಯಮಂತ್ರಿಯಾಗಿದ್ದವರು ಅವರ ಬಗ್ಗೆ ಲಘುವಾಗಿ ಮಾತಾಡುವುದು ತಪ್ಪಾಗುತ್ತದೆ, ಅವರು ಕಾಂಗ್ರೆಸ್ ಬಿಡೋದಿಲ್ಲ ಎಂದರು.