ಗದಗ:- ಭಯಾನಕ ಭವಿಷ್ಯವೊಂದನ್ನು ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಅವರು ನುಡಿದಿದ್ದಾರೆ.
ಜಗತ್ತಿಗೆ ಒಳ್ಳೆಯ ದಿನಗಳಿಲ್ಲ ಎಂದು ಹೇಳಿದ್ದಾರೆ. ಬಾಂಬ್ ಸಿಡಿಯುವ ಸಂಭವವಿದ್ದು, ಯುದ್ಧ ಭೀತಿ ಆವರಿಸಲಿದೆ. ಭೂಕಂಪ.. ಜಲ ಕಂಟಕವೂ ಇದೆ. ಜನರು ತಲ್ಲಣವಾಗುತ್ತಾರೆ ಎಂದು ಭವಿಷ್ಯ ತಿಳಿಸಿದ್ದಾರೆ.
ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ, ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳಿಗೆ ಸಾವಾಗುವ ಲಕ್ಷಣ.. ಅಸ್ಥಿರತೆ, ಯುದ್ಧ ಭೀತಿ.. ಅಣು ಬಾಂಬ್ ಸ್ಫೋಟವಾಗುವ ಸಾಧ್ಯತೆಗಳಿವೆ. ಜಗತ್ತಿಗೆ ವಿನಾಶ ಕಾದಿದೆ.. ರೋಗ, ಸುನಾಮಿ ಸಂಭವಿಸಲಿದೆ. ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ದೈವ ನಂಬುವುದೊಂದೆ ಪರಿಹಾರ.. ದೈವ ಮೊರೆ ಹೋಗ್ಬೇಕು ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.