ಧಾರವಾಡ: ವಿದ್ಯುತ್ ಕಾಯ್ದೆ 2023 ನ್ನು ರದ್ದುಗೊಳಿಸಲು ಅಗ್ರಹಿಸಿ ಹಾಗೂ ರೈತರ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ, ಧಾರವಾಡ ತಾಲೂಕಿನ ಮಾವಿನಕೊಪ್ಪ ಗ್ರಾಮಸ್ತರು ಗ್ರಾಮದಲ್ಲಿ ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಗ್ರಾಮದ ಮುಖ್ಯ ರಸ್ತೆಯಲ್ಲಿ ರೈತರು ಸೇರಿದಂತೆ ಮಹಿಳೆಯರು ಸಂಯುಕ್ತ ಹೋರಾಟ ಕರ್ನಾಟಕಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಬರಗಾಲದಿಂದಾಗಿ ರೈತ ಸಮುದಾಯ ಸಂಕಷ್ಟದಲ್ಲಿದೆ. ಸರ್ಕಾರಗಳು ರೈತರ ನೇರವಿಗೆ ಸಕಾಲಕ್ಕೆ ಬರುತ್ತಿಲ್ಲ. ಈ ಕಡೆ ಬೆಳೆಯು ಇಲ್ಲ, ಆ ಕಡೆ ಸರ್ಕಾರಗಳ ಸಹಕಾರವು ಇಲ್ಲ,
ಇದರಿಂದಾಗಿ ರೈತ ಬೀದುಗೆ ಬರುತ್ತಿದ್ದಾರೆ. ಈಗ ವಿದ್ಯುತ್ ಅನ್ನು ಖಾಸಗೀಕರಣ ಮಾಡುವ ವಿದ್ಯುತ್ ಕಾಯ್ದೆ 2023ರನ್ನು ಜಾರಿಗೆ ತರುತ್ತಿದ್ದಾರೆ, ಇದೂ ಕೂಡಾ ಭವಿಷ್ಯದಲ್ಲಿ ರೈತರಿಗೆ ಸಾರ್ವಜನಿಕರಿಗೆ ಮಾರಕವಾಗಿಲಿದೆ. ಹಾಗಾಗಿ ಈ ಕೂಡಲೇ ಈ ಕಾಯ್ದೆ ಸೇರಿದಂತೆ ರೈತರ ಎಲ್ಲ ಬೆಳೆಗಳುಗೆ ಬೆಂಬಲ ಬೆಲೆ ನೀಡಬೇಕು ಎಂದು ಅಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.