ಲಾಹೋರ್: ಮನೆಯ ಪೋಷಕರ ನಡುವೆಯೂ ಸಹೋದರಿ ಬೇರೊಬ್ಬ ಯುವಕನನ್ನು ಮದುವೆಯಾಗಿದಕ್ಕೆ ಕುಪಿತಗೊಂಡ ಸಹೋದರ ಹರಿತವಾದ ಚಾಕುವಿನಿಂದ ಆಕೆಯನ್ನು ಹಲವು ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 25 ವರ್ಷದ ಶಾಜಿಯಾ ಸಹೋದರನಿಂದ ಕೊಲೆಯಾದ ದುರ್ದೈವಿ.
ಕೆಲವು ದಿನಗಳ ಹಿಂದೆ ಶಾಜಿಯಾ ಶೇರಕೋಟಾ ಪ್ರಾಂತದ ಯುವಕನೊಂದಿಗೆ ಪರಾರಿಯಾಗಿದ್ದರು. ಈ ವೇಳೆ ಶಾಜಿಯಾ ಸಹೋದರ ಮೊಹಮ್ಮದ್ ಇಶಾಖ್ ನನ್ನ ಸಹೋದರಿಯನ್ನು ಯುವಕನೊಬ್ಬ ಅಪಹರಿಸಿದ್ದಾನೆ ಎಂದು ನಾಪತ್ತೆ ಮತ್ತು ಅಪಹರಣ ದೂರನ್ನು ದಾಖಲಿಸಿದ್ದನು. ದೂರು ದಾಖಲಾದ ನಂತರ ಶಾಜಿಯಾ ಯುವಕನೊಂದಿಗೆ ಮದುವೆಯಾಗಿ ಹಿಂದುರುಗಿ ಬಂದಿದ್ದರು.
ಶಾಜಿಯಾ ಹಿಂದುರಿಗಿದ ಕಾರಣ ಎರಡು ಕುಟುಂಬಗಳು ರಾಜಿ ಮೂಲಕ ದೂರನ್ನು ಹಿಂಪಡೆದಿದ್ದವು. ಶಾಜಿಯಾ ಮನೆಯಲ್ಲಿದ್ದಾಗ ಸಹೋದರ ಇಶಾಖ್ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಿ ಕುಟುಂಬದ ಮರ್ಯಾದೆಯನ್ನು ತೆಗೆದಿದ್ದಿ ಎಂದು ಹೇಳಿ ಹರಿತವಾದ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ.
ಶಾಜಿಯಾ ಕೊಲೆಯಾಗುವ ವೇಳೆ ಮನೆಯಲ್ಲಿ ಆಕೆಯ ಪೋಷಕರಿದ್ರು, ಇಶಾಖ್ ನನ್ನನ್ನು ತಡೆಯಲು ಮುಂದಾಗಿಲ್ಲ. ಈ ಸಂಬಂಧ ಶಾಜಿಯಾ ಹಿರಿಯ ಸಹೋದರಿ ಇಶಾಖ್ ಮತ್ತು ಮನೆಯ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.