ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ ಸಂಭ್ರಮ ಮನೆ ಮಾಡಿದೆ. ಬೆಳಗ್ಗೆ9 ಗಂಟೆಗೆ ಮಾಣಿಕ್ ಷಾ ಮೈದಾನದಲ್ಲಿ 75 ನೇ ಗಣರಾಜ್ಯೋತ್ಸವ ಸಂಭ್ರಮ ಆರಂಭವಾಗಲಿದೆ.
ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಧ್ವಜಾರೋಹಣ ಮಾಡಲಿದ್ದು ಧ್ವಜಾರೋಹಣಕ್ಕೆ ಮಾಣಿಕ್ ಷಾ ಮೈದಾನದಲ್ಲಿ ಸಕಲ ಸಿದ್ದತೆ ಆಗಿದೆ.
ಧ್ವಜಾರೋಹಣ ಬಳಿಕ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೆ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗಿಯಾಗಿರೋ ಪೊಲೀಸ್ ಸ್ಕೌಟ್ಸ್, ಗೈಡ್ಸ್ ಎನ್ ಸಿಸಿ ಸೇವಾದಳ ಸೇರಿ ವಿವಿಧ ಶಾಲೆಗಳ ಕವಾಯಿತು
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1500 ಮಂದಿ ಭಾಗಿಯಾಗಲಿದ್ದು ಕಾರ್ಯಕ್ರಮದಲ್ಲಿ ರಾಜ್ಯಪಾಲರಿಂದ ವಿಜೇತರಿಗೆ ಬಹುಮಾನ ನೀಡಲಾಗುವುದು.
ಭದ್ರತೆ, ಸುರಕ್ಷತೆಗಾಗಿ 100 ಸಿಸಿ ಕ್ಯಾಮರಾ ಆಳವಡಿಕೆ 2 ಬ್ಯಾಗೇಜ್ ಸ್ಕಾೃನರ್, ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆ ಆಂಬುಲೆನ್ಸ್, ವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿ ನಿಯೋಜನೆ
ಅತಿಗಣ್ಯ, ಗಣ್ಯ ಸೇರಿ ಇತರೆ ಆಹ್ವಾನಿತರಿಗೆ ಮತ್ತು ಸಾರ್ವಜನಿಕರಿಗಾಗಿ 7 ಸಾವಿರ ಆಸನ ವ್ಯವಸ್ಥೆ ಗಣ್ಯ ವ್ಯಕ್ತಿಗಳಿಗೆ ಜಿ2 ದ್ವಾರದಲ್ಲಿ ಪ್ರವೇಶ ಅತಿ ಗಣ್ಯ ವ್ಯಕ್ತಿಗಳು, ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು ಬಿಎಸ್ಎ ಅಧಿಕಾರಿಗಳಿಗೆ ಜಿ4 ದ್ವಾರದಲ್ಲಿ ಪ್ರವೇಶ
ಜಿ5 ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಿಗೆ ಅವಕಾಶ ಆಹ್ವಾನಿತರು ಪ್ರವೇಶ ದ್ವಾರದಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಅರ್ಹ ಗುರುತಿನ ಚೀಟಿ ತರತಕ್ಕದು