ವಿಜಯಪುರ: ನಿನ್ನೆ ರಾತ್ರಿ 8.40 ನಿಮಿಷಕ್ಕೆ ಭೂ ಕಂಪನದ ಅನುಭವ ವಿಜಯಪುರ ಜನರಿಗೆ ಅನುಭವವಾಗಿದೆ.
ನಗರದ ಮನಗೂಳಿ ಪಟ್ಟಣದಲ್ಲಿ ಭೂ ಕಂಪನದ ಅನುಭವ ಆಗಿದ್ದು ರಿಕ್ಟರ್ ಮಾಪಕದಲ್ಲಿ 2.6 ತೀವೃತೆ ದಾಖಲಾಗಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣವಾಗಿದ್ದು ಅಲ್ಲಿ ರಾತ್ರು 8.40ರವೇಳೆ ಭೂಕಂಪನದ ಅನುಭವವಾಗಿದ್ದು ಜನರಲ್ಲಿ ಆತಂಕದ ಮನೆ ಮಾಡಿದೆ. ಈ ಬಗ್ಗೆ ಭೂ ಕಂಪನದ ಕುರಿತು ಜಿಲ್ಲಾಡಳಿತದಿಂದ ಮಾಹಿತಿ ದೊರೆತಿದೆ.
ಸರಣಿ ಭೂಕಂಪನಕ್ಕೆ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಆಗಾಗ ಸಂಭವಿಸುತ್ತಿದೆ. ಇದೀಗ ಜಿಟಿ ಜಿಟಿ ಮಳೆಗೆ ಮನೆಯ ಛಾವಣಿ ನೆನದಿವೆ. ಹೀಗಾಗಿ ಜನರು ಆತಂಕದಲ್ಲಿದ್ದಾರೆ.