ಉತ್ತರ ಕನ್ನಡ:- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಚೌಕನಗಾಳಾಯದಲ್ಲಿ ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ.
ರಾಕೇಶ್ ಮಹಾದೇವಪ್ಪ ಬಡಿಗೇರ, ರಿತೇಶ್ ಸುಬ್ರಹ್ಮಣ್ಯ ನಾಯರ್ ಹಾಗೂ ಕೃಷ್ಣ ವಣ್ಣುರಾಯ ಹರಿಜನ ಮೃತ ಯುವಕರು. ಅತಿವೇಗದ ಚಾಲನೆಯಿಂದ ಈ ದುರ್ಘಟನೆ ನಡೆದಿದ್ದು, ಜೊಯಿಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.