ತುಮಕೂರು: ಜಗದೀಶ್ ಶೆಟ್ಟರ್ ಬಿಜೆಪಿ ಸೇರಿದ ವಿಚಾರ ಈಗ ತಿಳಿಯಿತು. ನನಗೆ ನ್ಯೂಟನ್ ನೆನಪಾದ. ಅವರನ್ನ ಅವಮಾನ ಮಾಡಿ ಹೊರಹಾಕಿದ್ದರು. ಈಗ ಮತ್ತೆ ಅವರೇ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ಬಿಜೆಪಿ ಸೇರಿದ ವಿಚಾರಕ್ಕೆ ತುಮಕೂರಿನಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. .
ಅಲ್ಲಿ ಇರುತ್ತಾರೆ ಅನ್ನೋದು ಯಾವ ಗ್ಯಾರಂಟಿ. ಯಾವುದೇ ತತ್ವ ಸಿದ್ದಾಂತ ಪಾಲನೆ ಮಾಡದೇ ಸ್ವಾರ್ಥಕ್ಕೋಸ್ಕರ ಪಕ್ಷ ಬದಲಾವಣೆ ಮಾಡಿದ್ದಾರೆ. ಯಾವುದೇ ತತ್ವ ಸಿದ್ದಾಂತದ ಗೋಜಿಗೆ ಹೋಗದೇ ವೈಯಕ್ತಿಕಗಾಗಿ ಪಕ್ಷಾಂತರ ಮಾಡುವುದು ಒಪ್ಪುವ ಕ್ರಮವಲ್ಲ.
BREAKING.. Jagadish Shettar: ಅಮಿತ್ ಶಾ ಮಾತುಕತೆ ಯಶಸ್ವಿ: ಕಾಂಗ್ರೆಸ್ʼಗೆ ಗುಡ್ ಬೈ ಹೇಳಿದ ಮಾಜಿ ಸಿಎಂ
ಕಾಂಗ್ರೆಸ್ ನಿಂದಲೂ ಅವರಿಗೆ ಗೌರವ ಸಿಕ್ಕಿತ್ತು. ಯಾವುದೋ ಒತ್ತಡದಿಂದ ಹೀಗೆ ಆಗಿರಬಹುದೆನೋ ಗೊತ್ತಿಲ್ಲ. ಅವರು ಬಿಜೆಪಿ ಸೇರ್ಪಡೆಯಿಂದ ಅವರ ಗೌರವ ಕಡಿಮೆ ಆಗಿದೆ ಎನ್ನೋದು ನನ್ನ ಅಭಿಪ್ರಾಯ. ಹೀಗೆ ಯಾರೇ ಮಾಡಿದ್ರೂ ಜನರು ಒಪ್ಪುವುದಿಲ್ಲ. ಲೋಕಸಭಾ ಚುನಾವಣೆ ಸಮೀಪ ಇರುವ ಕಾರಣ ಹೋಗೊದು ಬರೋದು ಇದ್ದೆ ಇರುತ್ತದೆ. ಇವರು ಹೋದರೆ ಬೇರೆಯವರು ಬರುತ್ತಾರೆ ಎಂದರು.