ರಣ್ ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿದೆ. ಕಳೆದ ಡಿಸೆಂಬರ್ ನಲ್ಲಿ ರಿಲೀಸ್ ಆಗಿದ್ದ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಇದೀಗ ಅನಿಮಲ್ ಸಿನಿಮಾ ಒಟಿಟಿಯಲ್ಲಿ (OTT)ಬರಲು ರೆಡಿಯಾಗಿದೆ. ಗಣರಾಜ್ಯೋತ್ಸವದ ದಿನದಂದೇ ಈ ಚಿತ್ರವನ್ನು ಒಟಿಟಿಯಲ್ಲಿ ನೋಡಬಹುದಾಗಿದೆ.
ಈ ನಡುವೆ ಅನಿಮಲ್ ಚಿತ್ರತಂಡದೊಂದು ಮತ್ತೊಂದು ಹೊಸ ಸುದ್ದಿ ಬಂದಿದ್ದು, ಈ ಸಿನಿಮಾದ ಮುಂದಿನ ಭಾಗ ಕೂಡ ಬರಲಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಟೈಮ್ ಇನ್ನೂ ಈ ಕುರಿತು ಮಾಹಿತಿ ನೀಡದೇ ಇದ್ದರೂ, ಪಾರ್ಟ್ 2 (Part 2) ಹಾಗೂ ಆ ಭಾಗದಲ್ಲಿ ಇನ್ನೂ ರಕ್ತಸಿಕ್ತ ಅಧ್ಯಾಯ ಇರಲಿದೆ ಎಂದು ಚರ್ಚೆ ನಡೆಯುತ್ತಿದೆ.
ಸಿನಿಮಾ ರಿಲೀಸ್ ಆದ ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿತ್ತು. ಜೊತೆಗೆ ರಿಲೀಸ್ ದಿನದಿಂದ ಬಾಕ್ಸ್ ಆಫೀಸ್ (Box Office) ಕಲೆಕ್ಷನ್ ಏರುತ್ತಲೇ ಇದೆ. ಮೂರು ದಿನದ ಒಟ್ಟು ಕಲೆಕ್ಷನ್ ಮುನ್ನೂರು ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿತ್ತು. ಈ ಮೂಲಕ ಜವಾನ್ ನಂತರ ಬಾಲಿವುಡ್ ನ ಮತ್ತೊಂದು ಚಿತ್ರ ಕೋಟಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿತ್ತು.