ಬೆಂಗಳೂರು: ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ (VSM) ಮತ್ತು ಪ್ರಶಂಸನೀಯ ಪದಕ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ (Karnataka) 21 ಮಂದಿ ಅಧಿಕಾರಿಗಳ ಹೆಸರು ಪ್ರಕಟವಾಗಿದೆ.
ಎಡಿಜಿಪಿ ಸೌಮೇಂದು ಮುಖರ್ಜಿ, ಡಿವೈಎಸ್ಪಿ ಸುಧೀರ್ ಹೆಗ್ಡೆ ಅವರಿಗೆ ರಾಷ್ಟ್ರಪತಿಗಳ ಪ್ರಶಂಸನೀಯ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೇ ಐಜಿಪಿ ರಮಣ್ ಗುಪ್ತಾ, ಐಜಿಪಿ ಪ್ರವೀಣ್ ಮಧುಕರ್ ಸೇರಿದಂತೆ ಕರ್ನಾಟಕದ 21 ಜನರ ಪಟ್ಟಿ ಬಿಡುಗಡೆಯಾಗಿದೆ.
ವಿಶಿಷ್ಟ ಸೇವಾ ಪದಕ ಭಾರತೀಯ ಸಶಸ್ತ್ರ ಪಡೆಗಳಲ್ಲಿ ನೀಡುವ ಒಂದು ಪ್ರಶಸ್ತಿಯಾಗಿದೆ. ಭಾರತೀಯ ಸಶಸ್ತ್ರ ಪಡೆಗಳ ಯಾವುದೇ ಶ್ರೇಣಿಗಳ ಹುದ್ದೆ ಹೊಂದಿರುವವರ ಉನ್ನತ ರೀತಿಯ ವಿಶಿಷ್ಟ ಸೇವೆಯನ್ನು ಗುರುತಿಸಿ ಈ ಪದಕವನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳು ನೀಡುತ್ತಾರೆ.