ಜನವರಿ 23 (ಮಂಗಳವಾರ) ರಂದು ಹೈದರಾಬಾದ್ ನಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಪ್ರತಿಷ್ಠಿತ ಪಾಲಿ ಉಮ್ರಿಗಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ
ಏಕದಿನ ಮಾದರಿಯಲ್ಲಿ ಕಳೆದ ವರ್ಷ ಅತ್ಯಮೋಘ ಪ್ರದರ್ಶನ ತೋರಿದ್ದ ಶುಭಮನ್ ಗಿಲ್, ನ್ಯೂಜಿಲೆಂಡ್ ವಿರುದ್ಧ ದ್ವಿಶತಕ (208 ರನ್) ಸಿಡಿಸಿದ್ದಲ್ಲದೆ,38 ಇನಿಂಗ್ಸ್ ನಲ್ಲಿ ವೇಗದ 2000 ಏಕದಿನ ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು. 2023ರ ಕ್ಯಾಲೆಂಡರ್ ವರ್ಷದಲ್ಲಿ ಮೂರು ಮಾದರಿ ಕ್ರಿಕೆಟ್ ನಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಿದ್ದ ಗಿಲ್, ಈ ಪ್ರದರ್ಶನದಿಂದಲೇ ಅವರು ಪಾಲಿ ಉಮ್ರಿಗಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
“ನಾನು ಅಂದು ಸಾಕಷ್ಟು ಉತ್ಕಂಠತೆ ಹೊಂದಿದ್ದೆ. ನಾನು ಮೊದಲ ಬಾರಿ ಇಲ್ಲಿಗೆ (ಬಿಸಿಸಿಐ ಪ್ರಶಸ್ತಿ ಸಮಾರಂಭ) ಬಂದು ನನ್ನ ಆರಾಧ್ಯದೈವ ಹಾಗೂ ಕ್ರಿಕೆಟ್ ದಿಗ್ಗಜರನ್ನು ಭೇಟಿಯಾದಾಗ ನನಗೆ 14 ವರ್ಷ ವಯಸ್ಸಾಗಿತ್ತು. ವಿರಾಟ್ ಭಾಯ್ ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಅವಿಸ್ಮರಣೀಯ ಕ್ಷಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಇದರಿಂದ ನಾನು ಅಪ್ಪಟ ಸ್ಫೂರ್ತಿ ಪಡೆದು ಕ್ರಿಕೆಟ್ ಜೀವನದಲ್ಲಿ ಮತ್ತಷ್ಟು ಎತ್ತರದ ಮಟ್ಟಕ್ಕೆ ತಲುಪಲು ಸಹಕಾರಿ ಆಯಿತು. ಕಳೆದ ವರ್ಷ (2023) ತಂಡಕ್ಕೆ ತನ್ನ ಕೈಲಾದ ಪ್ರದರ್ಶನ ನೀಡಲು ಸಾಧ್ಯವಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ,” ಎಂದು ಶುಭಮನ್ ಗಿಲ್ ಸಂತಸ ವ್ಯಕ್ತಪಡಿಸಿದ್ದಾರೆ.