ಧಾರವಾಡ:- ರಾಮ ಮಂದಿರದ ಮೇಲೆ ಹಸಿರು ಧ್ವಜ ಹಾಕಿ ಪೋಟೋ ಎಡಿಟ್ ಮಾಡಿಲ್ಲದೆ, ಇಸ್ಲಾಮಿಕ ಪವರ್ ಎಂದು ಬರೆದುಕೊಂಡು ತನ್ನ ಮೊಬೈಲ್ ನಂಬರಗೆ ಸ್ಟೇಟ್ಸ್ ಹಾಕಿಕೊಂಡ ಯುವಕನನ್ನು ಬಂಧಿಸುವಲ್ಲಿ ಗರಗ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ತಾಲೂಕಿನ ತಡಕೋಡ್ ಗ್ರಾಮದ ಸದ್ದಾಂಹುಸೇನ ಇಸ್ಮಾಯಿಲ್ ಸಾಬ್ ನದಾಫ್ ಬಂಧಿತ ಕಿಡೆಗೇಡಿಯಾಗಿದ್ದಾನೆ. ಧಾರವಾಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಲ್ಲಿ ಸಾಮಾಜಿಕ ಜಾಲತಾಣದ ಮೇಲೆ ಧಾರವಾಡ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದರು. ಸದ್ದಾಂಹುಸೇನ ಇಸ್ಮಾಯಿಲ್ ಸಾಬ್ ನದಾಫ್ ಯುವಕನ ಕೃತ್ಯ ಬಯಲಿಗೆ ಬರುತ್ತಿದಂತೆ ಸ್ವಯೋ ಪ್ರೇರಿತ ದೂರು ದಾಖಲು ಮಾಡಿಕೊಂಡ, ಅಲರ್ಟ್ ಆದ ಗರಗ ಠಾಣೆಯ ಪೊಲೀಸರು ಈಗ ಯುವಕನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಇನ್ನೂ ಈ ಕುರಿತು ಶ್ರೀರಾಮ ಸೇನೆ ಆಕ್ರೋಶ ಹೊರಹಾಕಿದ್ದು, ಜನೆವರಿ 30 ರಂದು ಯುವಕನ ಮನೆಗೆ ಹೋಗಿ ಆಮಂತ್ರಣ ನೀಡುತ್ತೇವೆ. ಯುವಕನಿಗೆ ಅಷ್ಟೊಂದು ಪೌರುಷವಿದ್ದರೆ ರಾಮಮಂದಿರ ಖರ್ಚು ವೆಚ್ಚ ನೋಡಿಕೊಳ್ಳುತ್ತೇವೆ, ಅಲ್ಲಿಗೆ ಬದು ಮಂದಿರದ ಮೇಲೆ ಹಸಿರು ಧ್ವಜ ಹಾರಿಸಲೆಂದು ಚಾಲೇಜ್ ಮಾಡಿದ್ದಾರೆ.