ಸಿದ್ದಾಪುರ:- ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರಟಗಿ ತಾಲೂಕು ವತಿಯಿಂದ ಸಿದ್ದಾಪುರ ಗ್ರಾಮದ ಗೌರ್ಮೆಂಟ್ ಪಿಯುಸಿ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳ ದೂರು ಮೇರೆಗೆ ಕಾಲೇಜಲ್ಲಿ ವಿಚಾರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಲೇಜಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತಿ,ಸ್ವಾಮಿ ವಿವೇಕಾನಂದರ ಜಯಂತಿ, ಸುಭಾಷ್ ಚಂದ್ರ ಬೋಸ್ ಅವರ ಜಯಂತಿ, ಇದುವರೆಗೂ ಅಗಸ್ಟ್ 15 ಜನವರಿ 26ರಂದು ಹೊರತುಪಡಿಸಿ ಯಾವ ಜಯಂತಿಯನ್ನು ಕೂಡ ಕಾಲೇಜಲ್ಲಿ ಆಚರಣೆ ಮಾಡದಿರುವುದು ಅತ್ಯಂತ ಆಶ್ಚರ್ಯಕರ ಸಂಗತಿಯೂ ಆಗಿದೆ.
ಪ್ರಾಂಶುಪಾಲರು ನಮಗೆ ಸರ್ಕಾರದ ವತಿಯಿಂದ ಯಾವುದೇ ಆಚರಣೆ ಮಾಡಿ ಅಂತ ಹೇಳಿ ಆದೇಶ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು,
ಇದಕ್ಕೆ ವಿರುದ್ಧವಾಗಿ ಅಖಿಲವರ್ತ ವಿದ್ಯಾರ್ಥಿ ಪರಿಷತ್ ಕಾರಟಗಿ ತಾಲೂಕು ವತಿಯಿಂದ ಪ್ರಾಂಶುಪಾಲರಿಗೆ ಮನವಿಯನ್ನು ಕೊಪ್ಪಳ ಜಿಲ್ಲಾ ಸಹ ಸಂಚಾಲಕರಾದ ಅಭಿಷೇಕ್ ಹಿರೇಮಠ್, ಕಾರ್ತಿಕ್, ಮನೋಜ್, ಶರಣ್, ಭರತ್ ಅವರು ಮನವಿಯನ್ನು ಮಾಡಲಾಗಿದೆ ಆಚರಣೆಗಳು ಜಯಂತಿಗಳು ನಡೆಸಬೇಕೆಂದು, ಇಲ್ಲದಿದ್ದ ಪಕ್ಷದಲ್ಲಿ ರಾಷ್ಟ್ರದಲ್ಲಿ ರಾಷ್ಟ್ರೀಯತೆ, ದೇಶಪ್ರೇಮ ಉಳಿಯುವುದು, ಬಹಳ ಕಷ್ಟವಾಗುತ್ತೊಂದು ಸ್ಪಷ್ಟನೆ ನೀಡಿದರು