ಬೆಂಗಳೂರು:- ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆಲ್ಲಕೆರೆಯ ಡೆಲ್ಲಿ ಪ್ರೀ ಸ್ಕೂಲ್ ನಲ್ಲಿ ಫ್ರೀ ಸ್ಕೂಲ್ ನಿರ್ಲಕ್ಷ್ಯಕ್ಕೆ ನಾಲ್ಕು ವರ್ಷದ ಕಂದಮ್ಮ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ಜರುಗಿದೆ
ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಜಿನಾ ಅನ್ನಾ ಜಿಟೋ ಎಂಬ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ. ಜನವರಿ 22 ರ ಮಧ್ಯಾಹ್ನ ಖಾಸಗಿ ಫ್ರೀ ಸ್ಕೂಲ್ ಮೂರನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಈ ಹಿನ್ನಲೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಮಗು ಜಿನಾ ಚಿಂತಾಜನಕ ಸ್ಥಿತಿಯಲ್ಲಿದೆ.
ಖಾಸಗಿ ಕಂಪೆನಿಯಲ್ಲಿ ಟೆಕ್ಕಿಗಳಾಗಿರುವ ಜಿನಾ ತಂದೆ ಜಿಟೋ ಟಾಮಿ ಜೋಸೆಫ್ ಮತ್ತು ತಾಯಿ ಬಿನಿಟೋ ಥಾಮಸ್, ಮೂಲತಃ ಕೇರಳದ ನಿವಾಸಿಗಳಾಗಿದ್ದಾರೆ. ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದು, ತಮ್ಮ ಮಗುವನ್ನು ಇಲ್ಲಿನ ಖಾಸಗಿ ಸ್ಕೂಲ್ಗೆ ಸೇರಿಸಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ.