ಮೈಸೂರು:- ಬಿಜೆಪಿಯವರು ರಾಮನನ್ನು ಸೀತೆಯಿಂದ ಬೇರ್ಪಡಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ನಾವು ಪೂಜಿಸುವ ರಾಮನ ಜೊತೆಗೆ ಸೀತೆ, ಲಕ್ಷ್ಮಣ, ಹನುಮಂತ ಇರುತ್ತಾರೆ. ಅದಕ್ಕೆ ನಾವು ಸೀತಾರಾಮ ಎಂದು ಕರೆಯುತ್ತೇವೆ. ಬಿಜೆಪಿಯವರು ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದ್ದರಿಂದಲೇ ಸೀತೆ, ಲಕ್ಷ್ಮ,ಣ, ಹನುಮಂತನನ್ನು ಬೇರ್ಪಡಿಸಿದ್ದಾರೆ. ರಾಮನನ್ನು ಮಾತ್ರ ಉಳಿಸಿಕೊಂಡಿದ್ದಾರೆ ಎಂದರು
ಶ್ರೀರಾಮನನ್ನು ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿದ್ದಾರಾ? ನಮ್ಮೂರಲ್ಲಿ, ನಿಮ್ಮೂರಲ್ಲಿ ರಾಮಮಂದಿರ ಇಲ್ವಾ? ನಾವೆಲ್ಲ ರಾಮನನ್ನ ಪೂಜೆ ಮಾಡಲ್ವಾ? ನಾವೆಲ್ಲಾ ಹಿಂದೂಗಳಲ್ವಾ? ನನ್ನ ಹೆಸರಿನಲ್ಲೇ ರಾಮ ಇದ್ದಾನೆ. ನಾವು ಮಹಾತ್ಮ ಗಾಂಧಿ ಹೇಳುವ ರಾಮನ ಮೇಲೆ ನಂಬಿಕೆ ಇಟ್ಟಿದ್ದೇವೆ. ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್ ಎಂದು ಹೇಳಿದ್ದಾರೆ. ನಾವು ಪೂಜಿಸುವ ರಾಮನ ಜೊತೆಗೆ ಸೀತೆ, ಲಕ್ಷ್ಮಣ, ಹನುಮಂತ ಇರುತ್ತಾರೆ. ಅದಕ್ಕೆ ನಾವು ಸೀತಾರಾಮ ಎಂದು ಕರೆಯುತ್ತೇವೆ. ಬಿಜೆಪಿಯವರು ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದ್ದರಿಂದಲೇ ಸೀತೆ, ಲಕ್ಷ್ಮಣ, ಹನುಮಂತನನ್ನು ಬೇರ್ಪಡಿಸಿದ್ದಾರೆ. ರಾಮನನ್ನು ಮಾತ್ರ ಉಳಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯವರು ಜನರನ್ನು ಮರುಳು ಮಾಡುತ್ತಿದ್ದಾರೆ. ಹಿಂದುತ್ವದ ಹೆಸರಲ್ಲಿ ಅಧಿಕಾರ ಹಿಡಿದು ಕುಳಿತಿದ್ದಾರೆ. ರಾಮಮಂದಿರ ಉದ್ಘಾಟನೆ ಮಾಡಿದ್ದಾರೆ. ವ್ರತ ಮಾಡುತ್ತಾರಂತೆ. ನಾವು ರಾಮನ ಪೂಜೆ ಮಾಡಲ್ವ? ರಾಮನ ಭಜನೆ ಮಾಡಲ್ವ? ಧನುರ್ಮಾಸದಲ್ಲಿ ನಾನೂ ಬೆಳಗ್ಗೆ ಎದ್ದು ದೇವಸ್ಥಾನಕ್ಕೆ ಹೋಗಿ ರಾಮನ ಭಜನೆ ಹಾಡುತ್ತಿದ್ದೆ. ಮೊನ್ನೆ ಬೆಂಗಳೂರಿನಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದೆ. ಜೈ ಶ್ರೀರಾಮ್ ಅಂತ ಘೋಷಣೆ ಕೂಗಿಸಿದೆ. ನನ್ನ ಹೆಸರು ಸಿದ್ದರಾಮಯ್ಯ. ನನ್ನ ಹೆಸರಲ್ಲೇ ರಾಮ ಇದ್ದಾನೆ ಎಂದರು