ರಾಯಚೂರು: ಮಹಿಳೆ ವಿಚಾರದಲ್ಲಿ ಚಾಡಿ ಹೇಳಿದ ಆರೋಪಕ್ಕೆ ವ್ಯಕ್ತಿಯನ್ನ ಕಂಬಕ್ಕೆ ಕಟ್ಟಿ ಚಪ್ಪಲಿಯಿಂದ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಚಿಕ್ಕಬೆರಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,
ಅದೇ ಗ್ರಾಮದ ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಆರೋಪಿಸಿ ಗುಂಪು ವ್ಯಕ್ತಿ ಮೇಲೆ ಹಲ್ಲೆ ನಡೆಸಿದೆ.ಸಂತ್ರಸ್ತೆ ತನ್ನನ್ನು ಬಿಡುವಂತೆ ದಾಳಿಕೋರರಲ್ಲಿ ಮನವಿ ಮಾಡಿದರೂ, ಆರೋಪಿಗಳು ಆತನನ್ನು ಹಗ್ಗದಿಂದ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ.
ಈ ಘಟನೆ ಜನವರಿ 20ರಂದು ನಡೆದಿದೆ. ಆತನ ಪತ್ನಿ ನಾಗಮ್ಮ ರಕ್ಷಿಸಲು ಯತ್ನಿಸಿದಾಗ ಆಕೆಯ ಮೇಲೂ ಚಪ್ಪಲಿ, ದೊಣ್ಣೆಗಳಿಂದ ಥಳಿಸಿ, ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ನಿಂಗಪ್ಪ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಚಿಕಿತ್ಸೆಗಾಗಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಈ ಘಟನೆ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.