ಬೆಂಗಳೂರು: ಈ ದುಬಾರಿ ದುನಿಯಾ ದಲ್ಲಿ ಜನಸಾಮಾನ್ಯರು ಜೀವನ ಮಾಡೋಕೆ ಕಷ್ಟ ಎನ್ನಿಸಿದೆ.ಅಡುಗೆ ಎಣ್ಣೆ, ತೈಲ ನಿರಂತರವಾಗಿ ಹೆಚ್ಚಳ ದಿಂದ ಗ್ರಾಹಕರ ಕೈ ಸುಡುತ್ತಿದೆ.ಇದೀಗ ವಿದ್ಯುತ್ ಗ್ರಾಹಕರಿಗೆ ಮತ್ತೊಂದು ಶಾಕ್ ನ್ನ ಕೆಇಆರ್ಸಿ ನೀಡ್ತಿವೆ.ಹೌದು ಇಂಧನ ನಿರ್ವಹಣೆ ಸೇರಿದಂತೆ ಹಲವು ಕಾರಣಗಳನ್ನ ಮುಂದಿಟ್ಟುಕೊಂಡು ವಿದ್ಯುತ್ ದರ ಪರಿಷ್ಕರಣೆಗೆ ಸಕಲ ಸಿದ್ದತೆ ನಡೆಸಿದೆ..
ರಾಜ್ಯದಲ್ಲಿ ಈಗ ತಾನೇ ಬೇಸಿಗೆ ಆರಂಭವಾಗಿದೆ. ಆದ್ರೂ ಬೇಸಿಗೆ ಆರಂಭದಲ್ಲಿ ವಿದ್ಯುತ್ ಗ್ರಾಹಕರಿಗೆ ಬರೆ ಹಾಕಲು ಕೆಇಆರ್ಸಿ ಮುಂದಾಗಿವೆ. ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ಕಂಗಾಲಾಗಿರುವ ಮಂದಿಗೆ ಮತ್ತೆ ವಿದ್ಯುತ್ ಸರಬರಾಜು ಕಂಪನಿಗಳು ಶಾಕ್ ನೀಡಿಲು ಮುಂದಾಗಿವೆ. ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಕ್ಕಾಂ, ಚೆಕ್ಕಾಂ ಸೇರಿದಂತೆ ಇತರೆ ಕಂಪನಿಗಳು ಪ್ರತಿ ಬಾರಿಯಂತೆ ಈ ವರ್ಷವೂ ದರ ಹೆಚ್ಚಳಕ್ಕೆ ಸಿದ್ದತೆ ನಡೆಡಿವೆ.ಈಗಾಗಲೇ KERC ಮುಂದೆ ದರ ಪರಿಷ್ಕರಣೆ ಪಟ್ಟಿ ಇಟ್ಟಿವೆ. ಈ ಸಂಬಂಧ ಸಾರ್ವಜನಿಕ ಅಭಿಪ್ರಾಯ ಹಾಗೂ ಎಸ್ಕಾಂಗಳ ಅಭಿಪ್ರಾಯ ಸಂಗ್ರಹ ಮಾಡಲು ಕೆಇಆರ್ಸಿ ಮುಂದಾಗಿದೆ.
ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ ಮೆಸ್ಕಾಂ ಸೇರಿದಂತೆ ಇತರೆ ಇತರೆ ಕಂಪನಿಗಳು 2024 ಸಾಲಿನಲ್ಲಿ 40 ಪೈಸೆಯಿಂದ ,60 ಪೈಸೆಯವರಿಗೆ ವಿದ್ಯುತ್ ದರ ಹೆಚ್ಚಳಕ್ಕೆ ಮನವಿ ಮಾಡಿವೆ.ಈ ಮನವಿಯಲ್ಲಿ ಗಂಭೀರವಾಗಿ ಪರಿಶೀಲನೆ ಮಾಡಿರೋ ಕೆಇಆರ್ಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ದರ ಪರಿಷ್ಕರಣೆಗೆ ಮುಂದಾಗಿದೆ.ಕಳೆದ ಬಾರಿ 1 ರೂ 39 ರೂ ಹೆಚ್ಚಳಕ್ಕೆ ಪ್ರಸ್ತಾಪ ಇಡಲಾಗಿತ್ತು. ಆದ್ರೆ ಕೆ ಇ ಆರ್ ಸಿ ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು, ಕೇವಲ 35 ಪೈಸೆ ಮಾತ್ರ.ಆದ್ರೆ ಈ ಬಾರಿ ಸಾಧಕ ಬಾದಕಗಳನ್ನ ಪರಿಶೀಲನೆ 35 ರಿಂದ 45 ಪೈಸೆ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಪ್ರತಿ ಯೂನಿಟ್ ಗೆ ಇಂತಿಷ್ಟು ದರ ಹೆಚ್ಚಳ ಮಾಡಬೇಕು ಅನ್ನೋದು ಎಸ್ಕಾಂಗಳ ಬೇಡಿಕೆಯಾಗಿದೆ. ಈ ಸಂಬಂಧ ಸಾರ್ವಜನಿಕ ಅಭಿಪ್ರಾಯ ಸಹ ಸಂಗ್ರಹ ಮಾಡಲಿದೆ.ಆದ್ರೆ ಜನಸಾಮಾನ್ಯರಿಗೆ ಹೊರೆಯಾಗದಂತೆ ವಿದ್ಯುತ್ ದರ ಪರಿಷ್ಕರಣೆ ಮಾಡುವಂತೆ ಜನ ಮನವಿ ಮಾಡಿದ್ದಾರೆ.
ಬೈಟ್- ನಾಗೇಶ್ ಸಾರ್ವಜನಿಕ
ಇನ್ನೂ ಯಾವೆಲ್ಲಾ ವರ್ಷದಲ್ಲಿ ಎಷ್ಟೆಷ್ಟು ದರ ಪರಿಷ್ಕರಣೆಯಾಗಿತ್ತು ಅನ್ನೋ ಡಿಟೇಲ್ಸ್ ನೋಡೋದಾದ್ರೆ.
ಯಾವ ವರ್ಷ ಎಷ್ಟೆಷ್ಟು ದರ ಪರಿಷ್ಕರಣೆಯಾಗಿತ್ತು..?
– 2009 ರಲ್ಲಿ ಪ್ರತಿ ಯೂನಿಟ್ ಗೆ 34 ಪೈಸೆ ಹೆಚ್ಚಳ
– 2010 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ ಹೈಕ್
– 2011 ರಲ್ಲಿ ಪ್ರತಿ ಯೂನಿಟ್ ಗೆ 28 ಪೈಸೆ ಹೈಕ್
– 2012 ರಲ್ಲಿ ಪ್ರತಿ ಯೂನಿಟ್ ಗೆ 13 ಪೈಸೆ ಹೆಚ್ಚಳ
– 2013 ರಲ್ಲಿ ಪ್ರತಿ ಯೂನಿಟ್ ಗೆ 13 ಪೈಸೆ ಹೈಕ್
– 2017 ರಲ್ಲಿ ಪ್ರತಿ ಯೂನಿಟ್ ಗೆ 48 ಪೈಸೆ ಹೆಚ್ಚಳ
– 2019 ರಲ್ಲಿ ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ
– 2020 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ ಹೆಚ್ಚಳ
2022– ಪ್ರತಿ ಯೂನಿಟ್ ಗೆ 35 ಪೈಸೆ
2023- ಪ್ರತಿ ಯೂನಿಟ್ ಗೆ ,35 ಪೈಸೆ ಏರಿಕ
ವಿದ್ಯುತ್ ನಿರ್ವಹಣೆ ಹೆಸರಿನಲ್ಲಿ 2009ರ ಪ್ರತಿ ಯೂನಿಟ್ ಗೆ 34 ಪೈಸೆ, 2010 ರಲ್ಲಿ 30 ಪೈಸೆ, 2011ರಲ್ಲಿ 28 ಪೈಸೆ ಮತ್ತು 2012ರಲ್ಲಿ 13 ಪೈಸೆ, 2013 ರಲ್ಲಿ 13 ಪೈಸೆ, 2017 ರಲ್ಲಿ 48 ಪೈಸೆ ಹೆಚ್ಚಳ ಮಾಡಲಾಗಿತ್ತು. ಆದರೆ ಈ ಬಾರಿ ದುಬಾರಿ ದರ ಪರಿಷ್ಕರಣೆಯಾಗಿವ ಸಾಧ್ಯತೆ ಇದೆ..
ಮ.ಒಟ್ನಲ್ಲಿ ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗಾಲಾಗಿರುವ ಮಂದಿಗೆ ಮತ್ತೆ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ವಿದ್ಯುತ್ ದರ ಹೆಚ್ಚಳವಾದ್ರೆ, ಕೋಟ್ಯಾಂತರ ಗ್ರಾಹಕರಿಗೆ ಕರೆಂಟ್ ಶಾಕ್ ಬಿಸಿ ತಟ್ಟಲಿದೆ.