ಟಾಟಾ ಮೋಟಾರ್ಸ್ ಮುಂದಿನ ತಿಂಗಳಿಂದ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ತನ್ನ ಎಲ್ಲಾ ಪ್ರಯಾಣಿಕ ವಾಹನಗಳ ಬೆಲೆಗಳಲ್ಲಿ ಸರಾಸರಿ ಶೇಕಡ ಏಳರಷ್ಟು ಹೆಚ್ಚಳವನ್ನು ಮಾಡಲಿದೆ
ಫೆಬ್ರವರಿ ಒಂದರಿಂದ ಬೆಲೆ ಹೆಚ್ಚಳ ಅನ್ವಯವಾಗಲಿದೆ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗಿದ್ದು ಇದನ್ನು ಭಾಗಶಹ ಸರಿದೂಗಿಸಲು ಕಂಪನಿಯು ಈ ನಿರ್ಧಾರ ತೆಗೆದುಕೊಳ್ಳುತ್ತಿದೆ
ಕಂಪನಿಯು ಟಾಟಾ ಪಂಚ್ ನೆಕ್ಸನ್ ಮತ್ತು ಯಾರ್ಯಾರ್ ಸೇರಿದಂತೆ ಹಲವಾರು ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುತ್ತಿದೆ
ಹಣದುಬ್ಬರ ಮತ್ತು ಸರಕುಗಳ ಬೆಲೆ ಏರಿಕೆಯಿಂದ ಉಂಟಾದ ಒತ್ತಡದಿಂದಾಗಿ ಕಂಪನಿಯು ಬೆಲೆ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳುತ್ತಿದೆ
ಹಾಗೇ ವೆಚ್ಚ ಕಡಿಮೆ ಮಾಡಲು ನಾವು ಸಾಧ್ಯವಿರುವ ಎಲ್ಲಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಕಂಪನಿಯು ತಿಳಿಸಿದೆ