ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಎರಡೂ ಪಂದ್ಯಗಳಿಂದ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದಾರೆ. ಸರಣಿಯಲ್ಲಿ 5-0 ಅಂತರದ ವೈಟ್ವಾಶ್ ಗೆಲುವನ್ನು ಎದುರು ನೋಡುತ್ತಿರುವ ಭಾರತ ತಂಡಕ್ಕೆ ಇದು ಬಹುದೊಡ್ಡ ಹಿನ್ನಡೆಯಾಗಿದೆ ಕೊಹ್ಲಿ ಅನುಪಸ್ಥಿತಿ ಉಳಿದ ಆಟಗಾರರಿಗೆ ಮಿಂಚಲು ಸಿಕ್ಕಿರುವ ದೊಡ್ಡ ಅವಕಾಶ ಎಂದು ಧನಾತ್ಮಕ ಮಾತುಗಳನ್ನು ಆಡಿದ್ದಾರೆ.
ವೈಯಕ್ತಿಕ ಕಾರಣ ಕೊಟ್ಟು ಸರಣಿ ಆರಂಭಕ್ಕೆ ಕೆಲವೇ ದಿನಗಳಿರುವಾಗ ಮೊದಲ ಎರಡು ಪಂದ್ಯಗಳಿಂದ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದಾರೆ. ಅವರ ಈ ಕಾರಣಕ್ಕೆ ನೈಜ ಕಾರಣ ಏನೆಂಬುದು ಇನ್ನು ತಿಳಿದು ಬಂದಿಲ್ಲ. ಆದರೆ, ಕೊಹ್ಲಿ ತೆಗೆದುಕೊಂಡಿರುವ ಈ ನಿರ್ಧಾರವನ್ನು ಗೌರವಿಸಿ ಎಂದು ಅಭಿಮಾನಿಗಳಲ್ಲಿ ಮನತ್ತು ಮಾಧ್ಯಮದವರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮನವಿ ಮಾಡಿದೆ.
“ವಿರಾಟ್ ಕೊಹ್ಲಿ ಅವರಂತಹ ಗುಣಮಟ್ಟದ ಆಟಗಾರನ ಸೇವೆ ಇಲ್ಲದೇ ಹೋದಾಗ ಅದು ಯಾವುದೇ ತಂಡಕ್ಕೆ ದೊಡ್ಡ ಹಿನ್ನಡೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆತ ಅದ್ಭುತ ಆಟಗಾರ. ಅವರ ಅಮೋಘ ದಾಖಲೆಗಳು ಎಲ್ಲವನ್ನೂ ಹೇಳುತ್ತದೆ. ಆನ್ಫೀಲ್ಡ್ನಲ್ಲು ಅವರ ಉಪಸ್ಥಿತಿ ದೊಡ್ಡ ಬದಲಾವಣೆ ತರುತ್ತದೆ. ಆದರೆ ಅವರ ಅನುಪಸ್ಥಿತಿ ತಂಡದ ಉಳಿದ ಆಟಗಾರರಿಗೆ ಮಿಂಚಲು ಸಿಕ್ಕಿರುವ ದೊಡ್ಡ ಅವಕಾಶ ಎಂಬುದು ನನ್ನ ಭಾವನೆ,” ಎಂದು ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಕೊಹ್ಲಿ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ಬಗ್ಗೆ ನಾವೇನೂ ಮಾಡಲು ಸಾಧ್ಯವಿಲ್ಲ. ಅವರ ಅನುಪಸ್ಥಿತಿ ತಂಡಕ್ಕೆ ಕಾಡುವುದು ನಿಶ್ಚಿತ. ಆದರೆ, ಉಳಿದ ಆಟಗಾರರಿಗೆ ತಂಡದಲ್ಲಿ ಕೊಹ್ಲಿ ಹೊತ್ತ ಜವಾಬ್ದಾರಿಯನ್ನು ನಿಭಾಯಿಸಲು ಅವಕಾಶ ಸಿಕ್ಕಿದೆ,” ಎಂದಿದ್ದಾರೆ. ಐದು ಟೆಸ್ಟ್ಗಳ ಸರಣಿಯ ಮೊದಲ ಪಂದ್ಯ ಜನವರಿ 25ರಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಮೊದಲ ಟೆಸ್ಟ್ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11
01. ರೋಹಿತ್ ಶಾರ್ಮ (ಓಪನರ್/ ನಾಯಕ)
02. ಯಶಸ್ವಿ ಜೈಸ್ವಾಲ್ (ಓಪನರ್)
03. ಶುಭಮನ್ ಗಿಲ್ (ಬ್ಯಾಟರ್)
04. ಶ್ರೇಯಸ್ ಅಯ್ಯರ್ (ಬ್ಯಾಟರ್)
05. ಕೆಎಲ್ ರಾಹುಲ್ (ಬ್ಯಾಟರ್)
06. ಕೆಎಸ್ ಭರತ್ (ವಿಕೆಟ್ಕೀಪರ್/ ಬ್ಯಾಟ್ಸ್ಮನ್)
07. ರವೀಂದ್ರ ಜಡೇಜಾ (ಆಲ್ರೌಂಡರ್)
08. ಆರ್ ಅಶ್ವಿನ್ (ಆಲ್ರೌಂಡರ್)
09. ಅಕ್ಷರ್ ಪಟೇಲ್ (ಆಲ್ರೌಂಡರ್)
10. ಜಸ್ಪ್ರೀತ್ ಬುಮ್ರಾ (ಫಾಸ್ಟ್ ಬೌಲರ್)
11. ಮೊಹಮ್ಮದ್ ಸಿರಾಜ್ (ಫಾಸ್ಟ್ ಬೌಲರ್)