ಚಿಕ್ಕಬಳ್ಳಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ 11 ದಿನಗಳ ಕಾಲ ಉಪವಾಸ ವ್ರತ ಮಾಡಿದ್ದೇ ಅನುಮಾನ ಎಂದು ಮಾಜಿ ಸಿಎಂ ವೀರಪ್ಪಮೊಯ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರೀ ಎಳನೀರು ಕುಡಿದು ಉಪವಾಸ ಮಾಡಿದ್ರೆ ಮನುಷ್ಯ ಒಂದೆರೆಡು ದಿನದಲ್ಲಿ ಕೆಳಗೆ ಬೀಳುತ್ತಾನೆ. 11 ದಿನಗಳ ಕಾಲ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದರು.
ನಾನು ಬೆಳಗ್ಗೆ ವಾಕಿಂಗ್ ಮಾಡಬೇಕಾದರೆ ವೈದ್ಯರ ಬಳಿ ಈ ಬಗ್ಗೆ ಚರ್ಚೆ ಮಾಡಿದೆ. ವೈದ್ಯರ ಅಭಿಪ್ರಾಯದ ಪ್ರಕಾರ ಮನುಷ್ಯ ಬದುಕೋದು ಅಸಾಧ್ಯ. ಹಾಗಾಗಿ ನರೇಂದ್ರ ಮೋದಿಯವರು ಉಪವಾಸ ವ್ರತ ಮಾಡಿರೋದು ಅನುಮಾನ. ಹಾಗೆ ಉಪವಾಸ ಮಾಡದೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ರೆ ಆ ಕ್ಷೇತ್ರಕ್ಕೆ ಎಷ್ಟು ಪಾವಿತ್ರತ್ಯತೆ ಬರಲಿದೆ ಎಂದು ಪ್ರಶ್ನಿಸಿದರು.