ಬೆಂಗಳೂರು: 500 ವರ್ಷಗಳ ಬಳಿಕ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ಹಿಂದೂಗಳ ಅರಾಧ್ಯ ದೈವ ರಾಮನ ದರ್ಶನಕ್ಕೆಂದು ಹೋಗುವ ಭಕ್ತರ ಅನುಕೂಲಕ್ಕೆ ಜನವರಿ 31ರಿಂದ ಐದು ವಿಶೇಷ ರೈಲುಗಳು ಸಂಚರಿಸಲಿವೆ.
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗ್ತಿದ್ದಂತೆ, ಕರ್ನಾಟಕದಿಂದ ಅಯೋಧ್ಯೆಗೆ ತೆರಳಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮುಂದಾಗುತ್ತಿದ್ದಾರೆ. ಈ ನಡುವೆ ಭಾರತೀಯ ರೈಲ್ವೇ ಇಲಾಖೆಯು ಕರ್ನಾಟಕದಿಂದ ಆಯೋಧ್ಯೆಗೆ ಇದೇ 31ರಿಂದ 11 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಿದೆ.
ಶ್ರೀರಾಮ ಏನು ಬಿಜೆಪಿ ಮನೆಯವರ ಆಸ್ತೀನಾ: ಬಿಜೆಪಿ ನಾಯಕರ ವಿರುದ್ಧ ಡಿ.ಕೆ.ಶಿವಕುಮಾರ್ ಕಿಡಿ!
ನೈರುತ್ಯ ರೈಲ್ವೆಯು ಬೆಂಗಳೂರು, ಮೈಸೂರು, ತುಮಕೂರು, ಚಿತ್ರದುರ್ಗ, ಬೆಳಗಾವಿಯಿಂದ ಒಂದು ತಿಂಗಳ ಕಾಲ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಅಯೋಧ್ಯೆ ವಿಶೇಷ ರೈಲು ಜನವರಿ 31, ಫೆಬ್ರುವರಿ 14 ಮತ್ತು 28 ರಂದು ಸಂಚರಿಸಲಿವೆ. ಅರಸೀಕೆರೆ, ಗದಗ, ವಿಜಯಪುರ ಮಾರ್ಗವಾಗಿ ಸಂಚರಿಸಿ ಅಯೋಧ್ಯೆ ಧಾಮ ಕಡೆಗೆ ತೆರಳಲಿದೆ.
ಅಯೋಧ್ಯೆ ಧಾಮದಿಂದ ವಿಶ್ವೇಶ್ವರಯ್ಯ ಟರ್ಮಿನಲ್ಗೆ ಫೆಬ್ರುವರಿ 3, 17 ಮತ್ತು ಮಾರ್ಚ್ 2ರಂದು ರೈಲು ವಾಪಸ್ ಹೊರಡಲಿದೆ. ಮೈಸೂರು-ಅಯೋಧ್ಯೆ ವಿಶೇಷ ರೈಲು ಫೆಬ್ರುವರಿ 4. 18ರಂದು ಮೈಸೂರಿನಿಂದ ಹೊರಡಲಿದೆ.