ನಟಿ ತಪಸ್ವಿನಿ ಪೂಣಚ್ಚ (Thapaswini Poonacha) ಅವರು ಸೀತಾ ಮಾತೆಯ ಥೀಮ್ನಲ್ಲಿ ಸಖತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.
ಸೀತೆಯ ಗೆಟಪ್ನಲ್ಲಿ ನಟಿ ಗಮನ ಸೆಳೆದಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
‘ಹರಿಕಥೆ ಅಲ್ಲ ಗಿರಿಕಥೆ’ (Harikathe Alla Girikathe) ಚಿತ್ರದ ನಟಿ ತಪಸ್ವಿನಿ ಪೂಣಚ್ಚ ಅವರು ಕೆಂಪು ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ.
ಸೀತಾ ಮಾತೆಯಂತೆ ಕಾಣಿಸಿಕೊಳ್ಳುವ ಮೂಲಕ ತಪಸ್ವಿನಿ ನೋಡುಗರ ಮನಗೆದ್ದಿದ್ದಾರೆ.
ನಟಿಯ ಲುಕ್ಗೆ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಹರಿದು ಬರುತ್ತಿವೆ.
ರಿಷಬ್ ಶೆಟ್ಟಿಗೆ (Rishab Shetty) ನಾಯಕಿಯಾಗಿ ತಪಸ್ವಿನಿ ಸ್ಯಾಂಡಲ್ವುಡ್ಗೆ ಪರಿಚಿತರಾದರು.
‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದಲ್ಲಿ ಕೊಡಗಿನ ಕುವರಿ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು.
ಪ್ರಸ್ತುತ ‘ಗಜರಾಮ’ (Gajarama) ಸಿನಿಮಾದಲ್ಲಿ ತಪಸ್ವಿನಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರ ರಿಲೀಸ್ ಆಗಲಿದೆ.