ಬೆಳಗಾವಿ: ಪ್ರತಿಯೊಬ್ಬರು ಅಲ್ಪಮತಿಗೆ ಹೊಳೆದಷ್ಟು ಮಾತನಾಡುತ್ತಾರೆ. ಅಲ್ಪಮತಿಗಳ ಬಗ್ಗೆ ನಾನು ಹೆಚ್ಚು ಒತ್ತುಕೊಡುವುದಿಲ್ಲ” ಎಂದು ಶಾಸಕ ಲಕ್ಷ್ಮಣ ಸವದಿ ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಅಲ್ಪಮತಿ ಎಂದು ಜರಿದರು. ಅಥಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
Sleeping Tip: 6 ಗಂಟೆಗಿಂತ ಕಡಿಮೆ ನಿದ್ದೆ ಮಾಡ್ತೀರಾ..?! ವಕ್ಕರಿಸಿಬಿಟ್ಟೀತು ಈ ಮಾರಣಾಂತಿಕ ಖಾಯಿಲೆ ಹುಷಾರ್!
ರಾಮ ಮಂದಿರ ಆಹ್ವಾನ ಬಂದಿದೆಯಾ? ನೀವು ದೇಣಿ ಕೊಟ್ಟಿದ್ದೀರಾ? ಅಂತ ಮಾಧ್ಯಮದವರು ಪ್ರಶ್ನಿಸಿದರು. ಅದಕ್ಕೆ ನಾನು ಬಿಜೆಪಿಯಲ್ಲಿದ್ದಾಗ 10 ಲಕ್ಷ ರೂ. ದೇಣಿಗೆ ಕೊಟ್ಟಿರುವೆ ಎಂದು ಹೇಳಿದೆ. ಇಲ್ಲಿ ಯಾರೋ ಒಬ್ಬರು ಕೋಟಿ ಕೊಟ್ಟವರಿಗೆ ಕರೆದಿಲ್ಲಾ ಹತ್ತು ಲಕ್ಷ ಕೊಟ್ಟವರು ಏನು ದೊಡ್ಡ ವಿಷಯ ಅಂದಿದ್ದಾರೆ. ಅದರ ಬಗ್ಗೆ ನನಗೆ ಬೇಸರವೆ ಇಲ್ಲ ಎಂದರು.