ಸೋಮವಾರ ಅಯೋಧ್ಯಯಲ್ಲಿ ನಡೆದ ರಾಮನ ಪ್ರಾಣ ಪತ್ರಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೇಶದ ನಾನಾ ಭಾಗಗಳಲ್ಲಿ ಕಲಾವಿದರು, ಗಣ್ಯರು ಆಗಮಿಸಿದ್ದರು. ನಾನಾ ಸಿನಿಮಾ ರಂಗದ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು. ಇವರೆಲ್ಲರ ಪೈಕಿ ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಸಖತ್ ವೈರಲ್ ಆಗಿದ್ದಾರೆ. ಅವರ ಧರಿಸಿದ್ದ ಸೀರೆ ಈಗ ರಾಮನ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಯೋಧ್ಯಗೆ ಬಂದಿದ್ದ ಆಲಿಯಾ ಭಟ್, ಹನುಮಾನ್, ಭಗವಾನ್ ರಾಮ ಹಾಗೂ ರಾಮಸೇತು ಚಿತ್ರಗಳನ್ನು ಇರುವಂತಹ ಸೀರೆಯನ್ನು ಅವರು ಧರಿಸಿದ್ದರು. ಈ ಸೀರೆ ಈಗ ರಾಮನ ಅಭಿಮಾನಿಗಳನ್ನು ಸೆಳೆದಿದೆ. ಆಲಿಯಾ ಭಟ್ ಅವರ ರಾಮನ ಬಗೆಗಿನ ಭಕ್ತಿಯನ್ನು ಎಲ್ಲರೂ ಕೊಂಡಾಡಿದ್ದಾರೆ.
ಒಂದು ಕಡೆ ಆಲಿಯಾ ವೈರಲ್ ಆಗುತ್ತಿದ್ದರೆ, ಮತ್ತೊಂದು ಕಡೆ ಕನ್ನಡದಿಂದ ಹೋಗಿದ್ದ ರಿಷಬ್ ಶೆಟ್ಟಿ ಮತ್ತು ಪತ್ನಿ ಫೋಟೋಗಳನ್ನು ಅವರ ಅಭಿಮಾನಿಗಳು ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ (Rishab Shetty) ಅವರು ನಿನ್ನೆ ನಡೆದ (ಜ.22) ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪತ್ನಿ ಪ್ರಗತಿ ಜೊತೆ ಭಾಗಿಯಾಗಿದ್ದಾರೆ. ಈ ಕುರಿತ ಸುಂದರ ಫೋಟೋವನ್ನು ರಿಷಬ್ ಹಂಚಿಕೊಂಡಿದ್ದಾರೆ.
500 ವರ್ಷಗಳ ನಂತರ ಎಲ್ಲರ ಕನಸು ನನಸಾಗಿದೆ. ಇಂದು ಅಯೋಧ್ಯೆಯ (Ayodhya) ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಈ ಸಂಭ್ರಮದಲ್ಲಿ ಭಾಗಿಯಾಗಿರೋದಕ್ಕೆ ರಿಷಬ್ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.