ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದರೆ ಇದಕ್ಕೆ ಇವರಿಬ್ಬರೂ ಈವರೆಗೂ ಯಾವ ಪ್ರತಿಕ್ರಿಯೆಗಳನ್ನೂ ನೀಡಿಲ್ಲ. ಆದ್ರೆ ಇದರ ನಡುವೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಶುಭಮನ್ ಗಿಲ್ ಸೋದರಿ ಶಹ್ನೀಲ್ ಜೊತೆ ಓಡಾಡುತ್ತಿರುವ ವೀಡಿಯೋವೊಂದು ಪಪಾರಾಜಿ ಕ್ಯಾಮರಾದಲ್ಲಿ ಸೆರೆಯಾಗಿದ್ದು,
ಈ ವೀಡಿಯೋದಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಸಾರಾ ತೆಂಡೂಲ್ಕರ್ ಹಾಗೂ ಶುಭಂ ಸೋದರಿ ಶಹ್ನೀಲ್ ಗಿಲ್ ಕುಳಿತಿರುವುದನ್ನು ಕಾಣಬಹುದು. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ವೀಡಿಯೋ ನೋಡಿದ ಜನ ಸಾರಾ ಹಾಗೂ ಶುಭಮನ್ ಗಿಲ್ ಪ್ರೇಮ ಸಂಬಂಧ ಖಚಿತವಾಗಿದೆ. ಇದೇ ಕಾರಣಕ್ಕೆ ಶುಭಮನ್ ಗಿಲ್ ಸೋದರಿ ಜೊತೆ ಸಾರಾ ಓಡಾಡುತ್ತಿದ್ದಾಳೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಶುಭಮನ್ ಗಿಲ್ಗೆ ಕಂಗ್ರಾಟ್ಸ್ ಹೇಳಿದ್ದಾರೆ.
Sara and Shubman’s sister Shahneel tonight 🥰💓 #SaraTendulkar #ShubmanGill pic.twitter.com/fv37iCNXKa
— T (@Gladlyel) January 20, 2024
ಶುಭಮನ್ ಮತ್ತು ಸಾರಾ ತೆಂಡೂಲ್ಕರ್ ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಪೋಸ್ಟ್ಗಳಿಗೆ ಕಾಮೆಂಟ್, ಟ್ಯಾಗ್ ಮಾಡುತ್ತಿದ್ದರು. ಏತನ್ಮಧ್ಯೆ, ಅವರಿಬ್ಬರ ನಡುವಿನ ಸಂಬಂಧದ ಕುರಿತು ಮಾತುಗಳು ಕೇಳಿಬಂದಿತ್ತು. ನೆಟ್ಟಿಗರು ಇಬ್ಬರ ಮೀಮ್ಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಎರಡೂ ಹೆಸರುಗಳು ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದ್ದವು. ಆದರೆ ಸಾರಾ ಮತ್ತು ಶುಬಮನ್ ಯಾರೂ ಈ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ.