ಸಿಹಿ ಅಡುಗೆಯನ್ನು ಮಾಡಬೇಕು ಎಂದು ನೀವೆನಾದ್ರೂ ಪ್ಲ್ಯಾನ್ ಮಾಡಿದ್ದರೆ, ಗಸಗಸೆ ಪಾಯಸವನ್ನು ಮಾಡಿ ಸವಿಯಿರಿ. ಬೆಲ್ಲವನ್ನು ಬಳಸಿಕೊಂಡು ಅತ್ಯಂತ ಸರಳವಾಗಿ ಈ ಪಾಯಸವನ್ನು ಮಾಡುವ ವಿಧಾನ ಈ ಕೆಳಗಿನಂತಿದೆ.
ಬೇಕಾಗುವ ಸಾಮಗ್ರಿಗಳು:
* ಗೋಡಂಬಿ-ಸ್ವಲ್ಪ
* ಬಾದಾಮಿ-ಸ್ವಲ್ಪ
* ಕಪ್ ತೆಂಗಿನಕಾಯಿ- 1ಕಪ್
* ಕಪ್ ಬೆಲ್ಲ- 1ಕಪ್
* ಏಲಕ್ಕಿ ಪುಡಿ- ಸ್ವಲ್ಪ
* ಗಸಗಸೆ- 2ಕಪ್
* ತುಪ್ಪ- ಅರ್ಧ ಕಪ್
* ಒಣದ್ರಾಕ್ಷಿ- ಸ್ವಲ್ಪ
ಮಾಡುವ ವಿಧಾನ:
* ಬಾಣಲೆಯಲ್ಲಿ ಗಸಗಸೆ, ಗೋಡಂಬಿ, ಬಾದಾಮಿ, ಗಸಗಸೆ ತುಪ್ಪವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
* ಹುರಿದ ಪದಾರ್ಥಗಳು, ತೆಂಗಿನಕಾಯಿ ತುರಿ ಸ್ವಲ್ಪ ನೀರನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು.
* ಒಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪ, ಬೆಲ್ಲವನ್ನು ಕರಗಿಸಿಕೊಳ್ಳಬೇಕು.
* ನಂತರ ಈ ಪಾತ್ರೆಗೆ ತಯಾರಾದ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಾದಲ್ಲಿ ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ
* ನಂತರ ಇನ್ನೊಂದು ಬಾಣಲೆಗೆ ತುಪ್ಪ, ಗೋಡಂಬಿ, ಒಣದ್ರಾಕ್ಷಿಯನ್ನು ಚಿನ್ನದ ಕಂದು ಬಣ್ಣ ಬರುವವರೆಗೆ ಹುರಿಯಿರಿದುಕೊಳ್ಳಬೇಕು.
ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಖೀರ್ ಮೇಲೆ ಸುರಿದು, ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ
ಗಸಗಸೆ ಪಾಯಸ ಆನಂದಿಸಲು ಸಿದ್ಧವಾಗುತ್ತದೆ.