ಬೆಂಗಳೂರು: ಅಯೋಧ್ಯಾ ನಗರದ ರಾಮಮಂದಿರದಲ್ಲಿ ಇಂದು ರಾಮನ ಪ್ರಾಣಪ್ರತಿಷ್ಟಾ ಕಾರ್ಯವು ವಿಜೃಂಭಣೆಯಿಂದ ನೆರವೇರಿತು. ಪ್ರಧಾನಿ ಮೋದಿ ಈ ಕಾರ್ಯವನ್ನು ನಿಗದಿತ ಸಮಯಕ್ಕೆ ಸರಿಯಾಗಿ ನೆರವೇರಿಸಿದ್ದಾರೆ.
ಸುಮಾರು 500 ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ ಕನಸು ನನಸಾಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಾಗಿದೆ. ಇದರೊಂದಿಗೆ ರಾಮಮಂದಿರವು ಉದ್ಘಾಟನೆಯಾದಂತಾಗಿದ್ದು, ದೇಶಾದ್ಯಂತ ಸಂತಸ ಮನೆ ಮಾಡಿದೆ.
ಹಾಗೆ ಸಿಲಿಕಾನ್ ಸಿಟಿಯಲ್ಲಿಇಂದೇ ತಮ್ಮ ಡೆಲಿವರಿ ಆಗಬೇಕೆಂದು ತುಂಬಾ ಜನ ಕಾಯುತ್ತಿದ್ದರು. ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾನೆ ದಿನ ಕಂದಮ್ಮಗಳನ್ನು ಪಡೆಯಲು ಕೆಲ ಪೋಷಕರು ಆಸಕ್ತಿ ವಹಿಸಿದ್ದರು ಹಾಗಾಗಿ ಇಂದು ಮಕ್ಕಳಿಗೆ ಜನ್ಮ ಕೊಡಲು ಪೋಷಕರು ಆಸಕ್ತಿ ವಹಿಸಿದ್ದಾರೆ. ಹಾಗಾದ್ರೆ ಇಲ್ಲಿವರೆಗೆ ಎಷ್ಟು ಜನ ಮಕ್ಕಳನ್ನು ಪಡೆದರು ಗೊತ್ತಾ ಇಲ್ಲಿದೆ ನೋಡಿ!
- ವಾಣಿವಿಲಾಸ್ ಆಸ್ಪತ್ರೆಯಲ್ಲಿ 28 ಕಂದಮ್ಮಗಳು ಜನಿಸಿದ್ದು, ಈ ಪೈಕಿ 10 ನಾರ್ಮಲ್, 1 ಸಿಸೇರಿಯನ್ ಮಾಡಲಾಗಿದೆ. ಗಂಡು 16, ಹೆಣ್ಣು 12
- ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈ ತನಕ 4 ಶಿಶುಗಳ ಜನನವಾಗಿದ್ದು, ಈ ಪೈಕಿ 2 ಸಹಜ, 2 ಸಿಸೇರಿಯೆನ್
- ಘೋಷಾ ಆಸ್ಪತ್ರೆಯಲ್ಲಿ ಒಟ್ಟು 6 ಕಂದಮ್ಮಗಳ ಜನನ, 5 ನಾರ್ಮಲ್, 1 ಸಿಸೇರಿಯನ್
- ಇತರೆ ಖಾಸಗಿ ಆಸ್ಪತ್ರೆಗಳಲ್ಲಿ 25 ಕ್ಕೂ ಅಧಿಕ ಮಕ್ಕಳ ಜನನವಾಗಿದೆ.
- ಖಾಸಗಿ ಆಸ್ಪತ್ರೆಗಳಲ್ಲಿ ಡೆಲಿವರಿ ಮಾಹಿತಿ ನೀಡದಂತೆ ಪೋಷಕರು ತಾಕೀತು ಮಾಡಿದ್ದು, ಈ ಹಿನ್ನೆಲೆ ಡೆಲಿವರಿ ಮಾಹಿತಿ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕಿದ್ದಾರೆ.