ಬೆಂಗಳೂರು: ಇವತ್ತು ಆಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಪಾನೆ ಹಿನ್ನೆಲೆಯಲ್ಲಿ ನಗರದ ಹಲವು ದೇಗುಲಗಳಲ್ಲಿ ವಿಶೇಷ ಅಭಿಷೇಕ, ಪೂಜೆ, ಹೋಮ ಹವನಗಳುನಡೆಯುತ್ತಿವೆ.
ರಾಜಾಜಿನಗರದ ರಾಮಮಂದಿರ ದೇವಾಲಯದಲ್ಲೂ ಬೆಳಿಗ್ಗೆಯಿಂದ ವಿಶೇಷ ಪೂಜೆ, ಹೋಮ ನಡೆಯುತ್ತಿದ್ದು ಮುಂಜಾನೆ 3 ಗಂಟೆಗೆ ಶ್ರೀರಾಮನಿಗೆ ಅಭಿಷೇಕ..ಬಳಿಕ ರಾಮನಿಗೆ ವಿಶೇಷ ಅಲಂಕಾರ ಬೆಳಿಗ್ಗೆ 6 ಗಂಟೆಯಿಂದ ದೇವರ ದರ್ಶನ ಪಡೆಯುತ್ತಿರುವ ಭಕ್ತರು
9.30ರಿಂದ ರಾಮತಾರಕ ಹೋಮ ಆರಂಭಗೊಂಡು 12.30 ಪೂರ್ಣಾಹುತಿ ಆಗಲಿದೆ ರಾಮಮಂದಿರದಲ್ಲಿ ಇಡೀ ದಿನ ಭಜನೆ, ಪ್ರಸಾದ ವಿನಿಯೋಗ ನಡೆಯಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನಲೆ ಸಾರ್ವಜನಿಕರ ಅನುಕೂಲಕ್ಕೆ ಎಲ್ ಇಡಿ ವ್ಯವಸ್ಥೆ
ರಾಮಮಂದಿರದಲ್ಲಿ ಸಂಜೆ 6 ಗಂಟೆಗೆ 108 ದೀಪ ಬೆಳಗಲಿದೆ ರಾತ್ರಿ 10.30ರವರೆಗೂ ದೇವಾಲಯದಲ್ಲಿ ನಿರಂತರ ಭಜನೆ ನಡೆಯಲಿದೆ ಈಗಾಗಲೆ ವಿವಿಧ ಹಿಂದೂ ಸಂಘಟನೆಗಳಿಂದ ದೇವಾಲಯಕ್ಕೆ ಭೇಟಿ ಮಾಡಿ ಪೂಜೆ ಸಲ್ಲಿಕೆ