ಬೆಂಗಳೂರು:- ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಮಾದರಿಯಲ್ಲಿ ರಾಮಮಂದಿರದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ. ಗಿರಿನಗರದ ವಾಸವಿ ಕನ್ನಿಕಾ ಪರಮೇಶ್ವರ ದೇವಾಲಯದಲ್ಲಿ ಅಯೋಧ್ಯೆ ಮಾದರಿ ದೇವಾಲಯದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ 18 ಅಡಿ ಎತ್ತರದ ಅಯೋಧ್ಯೆ ರಾಮಮಂದಿರವನ್ನು ರಾಮಭಕ್ತರು ನಿರ್ಮಾಣ ಮಾಡಿದ್ದಾರೆ.
18 ಅಡಿ ಎತ್ತರ, 26 ಅಡಿ ಉದ್ದ, 20 ಅಡಿ ಅಗಲವಿರುವ ದೇವಾಲಯದ ಪ್ರತಿಕೃತಿ ನಿರ್ಮಾಣ ಮಾಡಲಾಗಿದ್ದು, ಥರ್ಮಾಕೋಲ್ ನಲ್ಲಿ ಅಯೋಧ್ಯೆ ಮಾದರಿಯ ದೇವಾಲಯ ನಿರ್ಮಾಣವಾಗಿದೆ. ದೇವಸ್ಥಾನದ ರಸ್ತೆ ಮುಂಭಾಗ ಬಗೆಗೆಗೆಯ ರಂಗೋಲಿಗಳಿಂದ ಭಕ್ತರಿಗೆ ಸ್ವಾಗತ ಮಾಡಲಾಗಿದೆ. ಭಕ್ತರಿಗೆ ಪ್ರಸಾದ ವಿತರಣೆ ಕಾರ್ಯ ಮಾಡಲಾಗಿದ್ದು, ಈಗಾಗಲೇ ದೇವರಿಗೆ ಅಭಿಷೇಕ ಮಾಡಿ ಮಹಾ ಮಂಗಳಾರತಿ ಕಾರ್ಯ ನಡೆದಿದೆ.