ದಾವಣಗೆರೆ: ಅಯೋಧ್ಯೆಯಲ್ಲಿ ಸೋಮವಾರ ಪ್ರಭು ಶ್ರೀರಾಮನ ಪ್ರಾಣಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿಯೂ ರಾಮಭಕ್ತರ ಸಂಭ್ರಮ ಜೋರಾಗಿದೆ. ಅಯೋಧ್ಯೆಯಲ್ಲಿನ ಕಾರ್ಯಕ್ರಮ ಯಶಸ್ವಿಯಾಗಲೆಂದು ದಾವಣಗೆರೆಯ ಸುಪರ್ ಮಾಮ್ಸ್ ಗ್ರುಪ್ ನ ಮಹಿಳೆಯರು ಸಾಮೂಹಿಕವಾಗಿ ರಾಮೋತ್ಸವವನ್ನ ಆಚರಣೆ ಮಾಡಿದ್ದಾರೆ.
ಮತ್ತೊಂದು ದಾಖಲೆ ಬರೆದ ಕಾಟೇರ ಸಿನಿಮಾ: 200 ಕೋಟಿ ರೂ.ಕ್ಲಬ್ ಸೇರಿದ ಪೋಸ್ಟರ್ ರಿಲೀಸ್!
ದಾವಣಗೆರೆಯ ವಿದ್ಯಾನಗರದ ಪಾರ್ಕ್ ನಲ್ಲಿ ಸುಮಾರು ನೂರಕ್ಕು ಹೆಚ್ಚು ಮಹಿಳೆಯರು ರಾಮನಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದರು. ಈ ವೇಳೆ ಶ್ರೀರಾಮ, ಸೀತಾ ಹಾಗೂ ಆಂಜನೇಯನ ವೇಷ ತೊಟ್ಟ ಮಕ್ಕಳಿಗೆ ಆರತಿಯನ್ನ ಬೆಳಗಿ ಪೂಜೆ ಸಲ್ಲಿಸಲಾಯಿತು. ಪೂಜೆ ಹಿನ್ನಲೆಯಲ್ಲಿ ಮಹಿಳೆಯರು ಸುಮಾರು ಎರಡು ಗಂಟೆಗಳ ಕಾಲ ರಾಮ ಜಪವನ್ನ ಮಾಡಿದರು.