ಹುಬ್ಬಳ್ಳಿ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಶಿಕ್ಷಣವಂತರನ್ನಾಗಿ ಮಾಡಬೇಕಿದೆ. ಶಿಕ್ಷಣ ವಂತ ಎಂಬುವುದು ಸರ್ವತೋಮುಖ ಅಭಿವೃದ್ಧಿಯಾಗಿದೆ. ದೇಶ, ಸಂಸ್ಕೃತಿ, ಪರಂಪರೆ, ಸಂಪ್ರದಾಯ ಭಾಷಯ ಬಗ್ಗೆ ಯಾರಿಗೆ ಯಾರಿಗೆ ಅಭಿಮಾನವಿರುತ್ತದೆಯೋ ಅವನು ನಿಜವಾದ ಶಿಕ್ಷಣವಂತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶನಿವಾರ ತಾಲೂಕಿನ ವರೂರ ಗ್ರಾಮದ ಎಸ್ ಡಿಎಂ ಜೈನ್ ಮಠ ಟ್ರಸ್ಟ್ ಎ.ಜಿ.ಎಂ.ರೂರಲ್ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನ ವತಿಯಿಂದ ನಗರದ ಕುಸುಗಲ್ ರಸ್ತೆ ನಲ್ಲಿ ಏರ್ಪಡಿಸಿದ್ದ ಉತ್ತರ ಕರ್ನಾಟಕದ ಶಿಕ್ಷಣ ತಂತ್ರಜ್ಞಾನರ ಸಭೆ ಯಲ್ಲಿ ಭಾಗವಹಿಸಿ ಮಾತನಾಡಿದರು.
ಜಗತ್ತಿನಲ್ಲಿ ಭಾರತ ಯುವ ದೇಶವಾಗಿದೆ. ವಿಶ್ವವೂ ಈಗ ಭಾರತವನ್ನು ನಂಬುತ್ತಿದೆ. ಜಗತ್ತಿನ ಸಮಸ್ಯೆಗಳಲ್ಲಿ ನಮಗೆನು ಬೇಕು ಎಂಬುವುದರ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ದೇಶದ ಹಿತಕ್ಕೆ ಬೇಕಾದ ನಿರ್ಣಯವನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ ಎಂದರು. ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಕ್ರಿಯಾಶೀಲ, ಮೂಲಸೌಕರ್ಯ ಬೆಳೆಸುವ ಶಕ್ತಿ ಶಿಕ್ಷಕರಿಗೆ. ಅಂಕ ಪಡೆದು ವಿದೇಶಕ್ಕೆ ಹೋಗುವ ಮನಸ್ಥಿತಿ ಸದ್ಯ ಬದಲಾಗಬೇಕಿದೆ. ವಿದ್ಯಾರ್ಥಿಗಳಿಗೆ ಇರುವ ಗುರುತಿಸುವ ಕೆಲಸ ಶಿಕ್ಷಣ ಸಂಸ್ಥೆ ಮಾಡಬೇಕಿದೆ. ಮೆಕಾಲೆ ಶಿಕ್ಷಣ ಪದ್ಧತಿಯಿಂದ ಹೊರ ಬರಬೇಕಿದೆ. ಪ್ರತಿಯೊಬ್ಬರಿಗೂ ಪ್ರತಿಭೆ ಇರುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಜೈನ್ ಮುನಿಗಳಿಂದ ವರೂರು ಗ್ರಾಮ ಪ್ರಸಿದ್ಧವಾಗಿದೆ. ಶಿಕ್ಷಣ ಸಂಸ್ಥೆ ಆರಂಭಿಸಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಎಂದರು. ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ಉತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಪಾಲಕರು ಇಲ್ಲಿಯೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮಕ್ಕಳ ಮನೆಯಲ್ಲಿರುವುದರಿಂದ ಸಂಸ್ಕಾರವಂತರಾಗುತ್ತಾರೆ. ಬೇರೆಡೆ ಮಕ್ಕಳನ್ನು ಕಳುಹಿಸಿ ಶಿಕ್ಷಣ ಕೊಡಿಸುವುದು ಅಪರಾಧವಾಗಿದೆ ಎಂದು ತಿಳಿಸಿದರು.
ಬೆಳಗಾವಿ ವಿಟಿಯು ಕುಲಸಚಿವ ಬಿ.ಇ. ರಂಗಸ್ವಾಮಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಕೌಶಲ್ಯಾಧಾರಿತ ಶಿಕ್ಷಣ ನೀಡುವ ಅವಶ್ಯಕತೆ ಇದೆ. ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳ ಶಿಕ್ಷಣ ಮುಗಿಸುತ್ತಲೆ ಉದ್ಯೋಗ ಪಡೆಯುವಂತ ಹಾಗೂ ಉದ್ಯಮ ಆರಂಭಿಸುವಂತಹ ಕೌಶಲ್ಯಾಧಾರಿತ ಶಿಕ್ಷಣ ನೀಡಬೇಕಿದೆ ಎಂದರು. ನಿರ್ದೇಶಕ ಸಂದೀಪ ಕ್ಯಾತಯನವರ, ಉತ್ತರ ಕರ್ನಾಟಕ ಭಾಗದ ಶಿಕ್ಷಣ ಸಂಸ್ಥೆಗಳು ಸ್ಪರ್ಧೆ ಮಾಡುತ್ತಿವೆ.
ಇದನ್ನು ಬಿಟ್ಟು ಗುಣಮಟ್ಟದ ಶಿಕ್ಷಣ ಒದಗಿಸಿದಾಗ ಮಾತ್ರ ಈ ಭಾಗದಲ್ಲಿ ಶಿಕ್ಷಣ ಪಡೆಯುತ್ತಾರೆ. ಕೌಶಲ್ಯಾಧರಿತ ಶಿಕ್ಷಣ ಈ ಭಾಗದ ವಿದ್ಯಾರ್ಥಿ ನೀಡಬೇಕಿದೆ. ನಮ್ಮಲಿರುವಂತಹ ಮಾನವ ಸಂಪನ್ಮೂಲಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ವರೂರಿನ ಗುಣಧರನಂದಿ ಜೈನ್ ಮುನಿ ಸಾನಿಧ್ಯವಹಿಸಿ ಮಾತನಾಡಿದರು. ಕವಿವಿ ಕುಲಪತಿ ಕೆ.ಬಿ. ಗುಡಸಿ, ಅರಸು ಎಂ., ಕರ್ನಾಟಕ ಮಾಧ್ಯಮಿಕ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ, ಮಾಜಿ ಮೇಯರ್ ಅನಿಲ ಕುಮಾರ ಪಾಟೀಲ, ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬಿಳಗಿ ಇದ್ದರು.