ಕಲಬುರಗಿ: ನಾಳೆ ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಭು ಶ್ರೀರಾಮ ಚಂದ್ರನ ಎಲ್ಲ ಧಾರ್ಮಿಕ ಕಾರ್ಯಗಳು ಸುಸೂತ್ರವಾಗಿ ನಡೆಯಲಿ ಅಂತ ಕಲಬುರಗಿಯ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಸತ್ಯಾತ್ಮತೀರ್ಥ ಸೇವಾ ಸಮಿತಿ ಇವತ್ತು ಸಾಮೂಹಿಕ ಪಾರಾಯಣ ನಡೆಸಿತು..
ಸುಮಾರು 50 ಅಧಿಕ ಸಂಖ್ಯೆಯ ರಾಮ ಭಕ್ತರು ಸಂಕಲ್ಪ ಮಾಡಿದ್ದು ರಾಮ ಮಂದಿರ ಉದ್ಘಾಟನೆ ಸಡಗರವನ್ನ ಇಡೀ ದೇಶವೇ ಕಣ್ತುಂಬಿಕೊಳ್ಳುತ್ತಿದೆ..ಹೀಗಾಗಿ ಎಲ್ಲ ಕಾರ್ಯಗಳು ಯಶಸ್ವಿಯಾಗಿ ನಡೆಯಲಿ ಅಂತ ಪಾರಾಯಣ ಮಾಡ್ತಿದ್ದೇವೆ ಅನ್ನೋದು ಸಮಿತಿಯ ಮುಖ್ಯಸ್ಥ ಸಮೀರ್ ದೇಶಪಾಂಡೆ ಮಾತು..